Saturday, August 13, 2011

ರೈಲು ಮತ್ತು ಬಸ್ಸಿನ ವೇಳಾ ಪಟ್ಟಿ

ರೈಲು ಮತ್ತು ಬಸ್ಸಿನ ವಿವರ ಸಂಗ್ರಹಣೆಗೆ ಚಾಲನೆ:

ಹಿಂದಿನ ದಿನದ ಸಭೆಯಲ್ಲಿ ಚರ್ಚೆಯಾದಂತೆ ನಾನು ನಮ್ಮ ಸಹೋದ್ಯೋಗಿ ಷಣ್ಮುಖ್ ನ ಸಹಾಯದೊಂದಿಗೆ ರೈಲ್ವೇ ವೆಬ್ ಸೈಟ್ ನಲ್ಲಿ ಬೆಂಗಳೂರಿನಿಂದ ಹೈದರಾಬಾಗೆ ಮತ್ತು ಹೈದರಾಬಾದ್ ನಿಂದ ಬೆಂಗಳೂರಿಗೆ ಲಭ್ಯವಿರುವ ರೈಲುಗಳ ಮಾಹಿತಿಯನ್ನು ದಿ. ೨೭-ಜುಲೈ-೨೦೧೧ ರಂದು ಸಂಗ್ರಹಿಸಿದೆ. ಅದರಂತೆ ದಿನಾಂಕ ೦೫.೧೦.೨೦೧೧ (ಭುಧವಾರ) ಯಶವಂತಪುರ - ಕಾಚಿಗುಡ ಎಕ್ಸ್ ಪ್ರೆಸ್ (ಟ್ರೈನ್ ನಂ: ೧೭೬೦೪) ಹೊರಡುವ ಸಮಯ ಸಂಜೆ: ೪.೧೫ ಮತ್ತು ಕಾಚಿಗುಡ ತಲುಪುವ ಸಮಯ ಗುರುವಾರ (೦೬.೧೦.೧೧) ಬೆಳಿಗ್ಗೆ ೦೫.೦೦ ಘಂಟೆ ಮತ್ತು ಲಭ್ಯವಿದ್ದ ಸೀಟುಗಳು ೧೫೬ ಮಾತ್ರ ಮತ್ತು ದರ: ರೂ.೨೭೪.೦೦. ಇದನ್ನು ಬಿಟ್ಟರೆ ಲಭ್ಯವಿದ್ದ ಮತ್ತೊಂದು ರೈಲು ಎಂದರೆ ಗರೀಭ್ ರಥ್ (ಟ್ರೈನ್ ನಂ: ೧೨೭೩೬, ಹೊರಡುವ ವೇಳೆ: ರಾತ್ರಿ ೮.೫೦, ತಲುಪುವ ಸಮಯ: ಮರುದಿನ ಬೆಳಿಗ್ಗೆ ೮.೩೫, ದರ: ರೂ: ೫೦೦.೦೦ ಮತ್ತು ಲಭ್ಯವಿದ್ದ ಸೀಟುಗಳ ಸಂಖ್ಯೆ: ೫೨೧)

ಅದೇರೀತಿ ಹಿಂತಿರುಗುವ ದಿನದ (೦೮.೧೦.೨೦೧೧ - ಶನಿವಾರದ) ಲಭ್ಯವಿದ್ದ ರೈಲು ಕೇವಲ ಕಾಚಿಗುಡ - ಯಶವಂತಪುರ ಎಕ್ಸ್ ಪ್ರೆಸ್ (ಟ್ರೈನ್ ನಂ: ೧೭೬೦೩, ಹೊರಡುವ ವೇಳೆ: ರಾತ್ರಿ ೯ ಘಂಟೆ ಮತ್ತು ಯಶವಂತಪುರ ತಲುಪುವ ಸಮಯ ಮರುದಿನ ಬೆಳೆಗ್ಗೆ ೧೦.೩೦, ಲಭ್ಯವಿದ್ದ ಸೀಟುಗಳ ಸಂಖ್ಯೆ: ೩೦೯ ಮತ್ತು ದರ: ರೂ.೨೭೪/-) ಎಂದು ತಿಳಿದುಬಂತು.

ಅದರ ಜೊತೆ ನಾನು ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವಿವರವನ್ನೂ ಪಡೆದುಕೊಂಡೆ. ಅದರ ವಿವರ ಇಂತಿದೆ:

ಬೆಂಗಳೂರಿನಿಂದ ಹೈದರಾಬಾದ್ ೫೭೨ ಕಿ.ಮೀ. ದೂರವಿದ್ದು. ಐರಾವತ (ವೋಲ್ವೋ) ದರ: ರೂ.೫೮೬/-, ರಾಜಹಂಸ ದರ: ರೂ.೪೯೬/- ಮತ್ತು ಕೊರೋನಾ (ಎ.ಸಿ.ಸ್ಲೀಪರ್) ದರ: ರೂ.೮೧೮/- ಎಂಬ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಸಭೆಯಲ್ಲಿ ಚರ್ಚೆ ಮಾಡಲು ಸಿದ್ಧತೆ ಮಾಡಿಕೊಂಡೆ.

No comments:

Post a Comment