ಕಿಂಗ್ ನಲ್ಲಿ ಬುಕ್ಕಿಂಗ್
ಸಿದ್ಧಪಡಿಸಿಟ್ಟುಕೊಂಡಿದ್ದ ಅಂತಿಮ ಸದಸ್ಯರ ಪಟ್ಟಿಯನ್ನು ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ ದಿನಾಂಕ: ೦೩/೦೮/೨೦೧೧ ರ ಬುಧವಾರ ಬೆಳೆಗ್ಗೆ ಕಿಂಗ್ ಫಿಶರ್ ಏರ್ಲೈನ್ಸ್ ನ ಬುಕ್ಕಿಂಗ್ ಕಛೇರಿಗೆ ಈ-ಮೇಲ್ ಮಾಡಿದೆ ಮತ್ತು ಈ ಕುರಿತಂತೆ ಅಲ್ಲಿನ ಸಿಬ್ಬಂಧಿ ಹೇಮಾಮಾಲಿನಿಯವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಾಗ ಸೀಮಾ ಅವರ ಸಂಪರ್ಕ ಸಿಕ್ಕಿತು. ಅವರು ಹೇಳಿದ್ದು "ಹೇಮಾಮಾಲಿನಿಯವರು ರಜೆಯಲ್ಲಿದ್ದಾರೆ ಮತ್ತು ಅವರು ವಹಿಸಿಕೊಂಡಿದ್ದ ನಿಮ್ಮ ಬುಕ್ಕಿಂಗ್ ಕಾರ್ಯವನ್ನು ನನಗೆ ವರ್ಗಾವಣೆ ಮಾಡಿದ್ದಾರೆ" ಎಂದು ತಿಳಿಸಿದರು ಮತ್ತು "ನೀವು ಕಳುಹಿಸಿದ್ದ ಸದಸ್ಯರ ಪಟ್ಟಿಯ ಈ ಮೇಲ್ ತಲುಪಿದ್ದು ಎಲ್ಲಾ ತಯಾರಿ ನಡೆಯುತ್ತಿದೆ ಅದು ಮುಗಿದ ಕೂಡಲೇ ನಿಮ್ಮನ್ನು ಸಂಪರ್ಕಿಸಿ ಕ್ರೆಡಿಟ್ ಕಾರ್ಡ್ ನ ವಿವರವನ್ನು ಪಡೆದುಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸುವೆ" ಎಂದು ತಿಳಿಸಿದರು. ಈ ಮಧ್ಯೆ ನಮ್ಮ ಪ್ರವಾಸದ ದಿನಾಂಕ ಮತ್ತು ಒಟ್ಟು ಪ್ರವಾಸದ ದಿವಸ ಇವೆಲ್ಲವನ್ನೂ ನಮ್ಮ ನಿರ್ವಾಹಕ ನಿರ್ದೇಶಕರಿಗೆ (ಎಂ.ಡಿ) ತಿಳಿಸಿ ಅವರಿಂದ ಅನುಮತಿ ಪಡೆದು ಮುಂದುವರೆಯಬೇಕೆಂದು ಕೊಂಡಿದ್ದೆವು. ಆದರೆ ಎಂ.ಡಿ ಯವರಾದ ಶ್ರೀಯುತ. ಎಸ್. ಸಿ.ಉಚ್ಚಿಲ್ ರವರು ಈ ಎಲ್ಲಾ ಮಾಹಿತಿಯನ್ನು ಮುರಳಿಯಿಂದ ಮುಂಚಿತವಾಗಿಯೇ ಪಡೆದುಕೊಂಡಿದ್ದರು ಮತ್ತು ಅವರೇ ಈ ವಿಚಾರವನ್ನು ಪ್ರಸಾದ್ ಜೊತೆ ಚರ್ಚಿಸಿ ದಿನಾಂಕ ಮತ್ತು ದಿವಸವನ್ನು ಖಚಿತ ಪಡಿಸಿಕೊಂಡರು. ಈ ಬೆಳವಣಿಗೆ ನಮಗೆಲ್ಲರಿಗೂ ಸಂತಸವನ್ನುಂಟುಮಾಡಿತು. ಇದೇ ಬೆಳವಣಿಗೆ ನಮ್ಮ ಆಟೋ ವಿಭಾಗದಲ್ಲೂ ಇ.ಡಿ. ಯವರಾದ ಶ್ರೀಯುತ. ಚಂದ್ರಶೇಖರ್ ರವರೂ ಇದಕ್ಕೆ ಸಂತೋಷದಿಂದ ಸಮ್ಮತಿ ಸೂಚಿಸಿದರು. ಆಗಲೇ ಘಂಟೆ ಎರಡಾಗಿತ್ತು ಆದರೂ ಸೀಮಾ ಅವರ ಕಡೆಯಿಂದ ಫೋನ್ ಬರಲಿಲ್ಲ, ೩ ಘಂಟೆಯಿಂದ ನಾನು ಅವರನ್ನು ಸಂಪರ್ಕಿಸಿ ಅವರಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಿ ನಮ್ಮ ಪ್ರಯಾಣವನ್ನು ಭದ್ರಪಡಿಸಿಕೊಳ್ಳೋಣವೆಂದರೆ ಅವರ ಸಂಪರ್ಕ ಸಿಗುತ್ತಿಲ್ಲ. ತಾಂತ್ರಿಕ ನಿರ್ದೇಶಕರಾದ ಶ್ರೀ.ವಿಕಾಸ್ ರವರು ಈ ಮಾಹಿತಿ ನೀಡಲು ಆತುರದಿಂದ ಕಾಯುತ್ತಿದ್ದರು. ಸತತ ಪ್ರಯತ್ನದ ಫಲವಾಗಿ ೪.೧೫ ರ ಆಸುಪಾಸಿನಲ್ಲಿ ಸೀಮಾರವರೇ ನನ್ನ ಮೊಬೈಲ್ ಗೆ ಫೋನ್ ಮಾಡಿ ಎಂ.ಡಿ. ಅವರ ಕ್ರೆಡಿಟ್ ಕಾರ್ಡ್ ನ ಮಾಹಿತಿಯನ್ನು ವಿಕಾಸ್ ರವರಿಂದ ಪಡೆದುಕೊಂಡು ನಮ್ಮೆಲ್ಲರ ವಿಮಾನ ದಲ್ಲಿನ ಆಸನವನ್ನು ಖಚಿತಪಡಿಸಿದರು. ಸಂಜೆ ಸುಮಾರು ೬ ಘಂಟೆಗೆ ನಮ್ಮೆಲ್ಲರ ಟಿಕೆಟ್ ಅನ್ನು ನನಗೆ ಈ-ಮೇಲ್ ಮಾಡಿದರು. ನಾನು ಅವೆಲ್ಲವನ್ನು ಅವರವರ ಮೇಲ್ ಗೆ ವರ್ಗಾಯಿಸಿ ಸಂಜೆ ೭.೩೦ ಕ್ಕೆ ಸಂತೋಷದಿಂದ ಆಫೀಸ್ ನಿಂದ ಮನೆಗೆ ಹೊರಟೆ.
ತಾಂತ್ರಿಕ ಕಾರಣಕ್ಕಾಗಿ
No comments:
Post a Comment