Wednesday, October 19, 2011

ಶಾಕ್ ಕೊಟ್ಟ ರಮೇಶ್

ಜನ-ಜೀವನ ಅಸ್ಥವ್ಯಸ್ಥ !!!

ರಮೇಶ್ ಮತ್ತು "ಬಾಂಬ್”


ಒಹ್ ಯಾರೂ ಗಾಬರಿಯಾಗಬೇಕಾಗಿಲ್ಲ. ನಾನು ಹೇಳಲು ಹೊರಟಿರುವುದು ಯಾವುದೇ ಹೋರಾಟದಿಂದಾಗಲೀ ಅಥವಾ ಬಂದ್ ನಿಂದಾಗಲೀ ಆದ ಅಸ್ಥವ್ಯಸ್ಥವಲ್ಲ. ಪ್ರವಾಸ ಹೊರಟಿರುವ ೩೨ ಸದಸ್ಯರ ತಂಡದಲ್ಲಿ ಉಂಟಾದ ಅಸ್ಥವ್ಯಸ್ಥ. ಹೌದು, ಪ್ರವಾಸದ ದಿನ ಇನ್ನು ೧೫ ದಿನ ಇದೆ ಎನ್ನುವಾಗಲೇ ನಮ್ಮ ತಂಡದ ಪ್ರಮುಖ ಸದಸ್ಯರೂ ಮತ್ತೂ ಎಲ್ಲಾ ಪ್ರವಾಸಗಳ ಮುಖ್ಯ ಕಾರ್ಯ ನಿರ್ವಾಹಕರೂ ಆದ ಶ್ರೀ.ರಮೇಶ್ ರವರು "ನಾನು ಈ ಬಾರಿ ಪ್ರವಾಸಕ್ಕೆ ಬರುವುದಿಲ್ಲ" ಎಂಬ ಪಟಾಕಿಯನ್ನು ನನ್ನ ಬಳಿ ದಿನ ಬಿಟ್ಟು ದಿನ ಸಿಡಿಸುತ್ತಿದ್ದರು. ನಾನು ಇದನ್ನು ಪ್ರತಿ ವರ್ಷದ ಹಾಗೆ ಒಂದು ಚಿನಕುರುಳಿ ಪಟಾಕಿಯನ್ನಾಗಿ ತೆಗೆದುಕೊಂಡು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೂ ಈ ವಿಷಯವನ್ನು ಪ್ರಸಾದ್, ಷಣ್ಮುಖ್, ಮಂಜುನಾಥ್, ಕೇಶವ್ ಮತ್ತು ಗಾಯಕ್ವಾಡ್ ರವರ ಬಳಿ ಚರ್ಚಿಸಿದ್ದೆ. ಎಲ್ಲರೂ ಹೇಳಿದ್ದೂ ಕೂಡ ಹೇಳಿದ್ದು "ಅವರು ಸುಮ್ಮನೆ ಹಾಗೆ ಹೇಳುತ್ತಾರೆ. ಆದರೆ ಅವರು ಪ್ರವಾಸಕ್ಕೆ ಬರುವುದು ನಿಶ್ಚಿತ" ಎಂದು. ಪ್ರವಾಸಕ್ಕೆ ದಿನಗಣನೆ ಆರಂಭವಾಗುವ ಹೊತ್ತಿಗೆ ಬಾಂಬ್ ಸಿಡಿಸಿದ ರಮೇಶ್ "ನಾನು ಪ್ರವಾಸಕ್ಕೆ ಬರಲು ಸಾಧ್ಯವೇ ಇಲ್ಲ. ನನ್ನ ಕಷ್ಟ ನನಗೆ ಗೊತ್ತು. ನೀವು ಯಾರೇ ಎಷ್ಟೇ ಒತ್ತಾಯ ಮಾಡಿದರೂ ಬರಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಕೇಶವ್ ರವರು ಲಕ್ಷ್ಮಣ ರೇಖೆ ಹಾಕಿ ಬರಬೇಕೆಂದರೂ ಕೂಡ ಬರಲು ಸಾಧ್ಯವಿಲ್ಲ" ಎಂದರು. ಈ ದಾಳಿಯಿಂದ ನಾನು ಸುಧಾರಿಸಿಕೊಳ್ಳಲು ಕೊಂಚ ಹೆಚ್ಚಿನ ಸಮಯ ತೆಗೆದುಕೊಂಡೆ. ನಂತರ ಹೆಚ್ಚಿನ ಸದಸ್ಯರ ಜೊತೆ ಈ ವಿಷವನ್ನು ಕೂಲಂಕುಷವಾಗಿ ಚರ್ಚಿಸಿ, ಅವರ ಕಷ್ಟಕ್ಕೆ ಸ್ಪಂದಿಸುವ ದೃಷ್ಟಿಯಿಂದ ಅವರ ಸ್ಥಾನಕ್ಕೆ ಅಲ್ಲಾಬಕಾಷ್ ನ ಹೆಸರನ್ನು ಸೂಚಿಸಿ ಒಪ್ಪಿಗೆಯನ್ನೂ ಪಡೆದುಕೊಂಡು, ಕಿಂಗ್ ಫಿಶರ್ ನ ಹೇಮಾಮಲಿನಿಯ ಸಹಾಯದಿಂದ ರಮೇಶ್ ಜಾಗಕ್ಕೆ ಬಕಾಷ್ ಹೆಸರನ್ನು ಸೇರಿಸಿ, ಬಕಾಷ್ ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಯಿತು.

No comments:

Post a Comment