ತಂಡಕ್ಕೆ ಹೊಸ ಸೇರ್ಪಡೆ
ಈ ಎಲ್ಲಾ ಬೆಳವಣಿಗೆಗಳ ನಡುವೆ, ತಂಡದ ಸದಸ್ಯರಲ್ಲಿ ಒಬ್ಬರಾದ ವಿಕಾಸ್ ರವರು ನಮ್ಮ ಸಂಸ್ಥೆಯ ಮಾಜಿ ಉದ್ಯೋಗಿ ಮತ್ತು ಸರಬರಾಜುದಾರರಲ್ಲಿ ಒಬ್ಬರಾದ ಶ್ರೀ. ವೀರೇಶ್ ರವರನ್ನು ಸಂಪರ್ಕಿಸಿ ಅವರನ್ನೂ ನಮ್ಮ ಜೊತೆ ಹೈದರಾಬಾದ್ ಪ್ರವಾಸಕ್ಕೆ ಆಹ್ವಾನಿಸಿದರು. ಇದಕ್ಕೆ ವಿವರಣೆ ಬಯಸಿದ ವೀರೇಶ್ ನನ್ನನ್ನು ಸಂಪರ್ಕಿಸಿ ವಿವರಣೆ ಪಡೆದು ಅವರ ಸಂದಿಗ್ದತೆಯನ್ನೂ ತೋಡಿಕೊಂಡರು. "ನನಗೆ ವಿಮಾನದಲ್ಲಿ ನಿಮ್ಮಗಳ ಜೊತೆ ಪ್ರಯಾಣ ಮಾಡುವ ಆಸೆ. ಆದರೆ ನಾನು ಪ್ರವಾಸಕ್ಕೆ ಬಂದರೆ ಕುಟುಂಬ ಸಮೇತನಾಗಿ ಬರಬೇಕು. ಕುಟುಂಬ ಸಮೇತ ಬಂದರೆ ವಿಮಾನ ಪ್ರಯಾಣ ಬಹಳ ದುಬಾರಿಯಾಗುತ್ತದೆ. ಅಲ್ಲದೇ ಅದೇ ದಿನಗಳಲ್ಲಿ ನಾನು ನಮ್ಮ ನೆಂಟರಿಷ್ಟರ ಜೊತೆ ಪ್ರವಾಸಕ್ಕೆ ಹೋಗುವ ಕಾರ್ಯಕ್ರಮಕ್ಕೆ ಕೂಡ ಒಪ್ಪಿಗೆ ನೀಡಿದ್ದೇನೆ. ಏನು ಮಾಡುವುದು?" ಎಂದ ಕೂಡಲೇ ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಜೀವನ ಸಹಚಾರಿಣಿ ಶ್ರೀಮತಿ. ಸೌಮ್ಯ ವೀರೇಶ್ ರವರು "ತಗಲಾಕ್ಕೊಂಡೇ ನಾನು .... " ಹಾಡನ್ನು ಹಾಡಿ ನನ್ನನ್ನು ಹಾಗೂ ವೀರೇಶ್ ರವರನ್ನು ರಂಜಿಸಿದರು. ತಮ್ಮ ಅಂತಿಮ ತೀರ್ಮಾನವನ್ನು ಸಧ್ಯದಲ್ಲೇ ತಿಳಿಸುತ್ತೇನೆಂದ ವೀರೇಶ್ ಫೋನಿನಲ್ಲಿನ ಸಂವಾದಕ್ಕೆ ತೆರೆ ಎಳೆದರು.
ತೀವ್ರ ಚರ್ಚೆ ಎಡೆಮಾಡಿ ಕೊಟ್ಟಿದ್ದ ಈ ವಿಷಯಕ್ಕೆ ಅಂಕುಶ ಹಾಕಿದವರು ಕೇಶವ್. ಪ್ರವಾಸಕ್ಕೆ ಇನ್ನು ನಾಲ್ಕೈದು ದಿನ ಇರುವಾಗ ಕೇಶವ್ ರವರು ರಮೇಶ್ ಸಿಡಿಸಿದ್ದ ಬಾಂಬ್ ಅನ್ನು ನಿಶ್ಕ್ರಿಯಗೊಳಿಸಿ ಅವರು ಪ್ರವಾಸಕ್ಕೆ ಬರುವ ವಿಷಯವನ್ನು ಖಚಿತ ಪಡಿಸಿದರಲ್ಲದೇ ಅವರಿಗಾಗಿ ಮತ್ತೊಂದು ಟಿಕೆಟ್ (ವಿಮಾನಕ್ಕೆ ಮತ್ತು ಟ್ರೈನ್ ಗೆ) ಖರೀದಿಸುವಂತೆ ತಿಳಿಸಿದರು. ನಾನು ಆನ್ ಲೈನ್ ಮುಖಾಂತರ ನಮ್ಮ ವಿಮಾನದಲ್ಲೇ ನಮಗಿಂತ ಹೆಚ್ಚಿನ ದರ ತೆತ್ತು ರಮೇಶ್ ಗೆ ಟಿಕೆಟ್ ಬುಕ್ ಮಾಡಿದೆ. ಅದೇ ರೀತಿ ಹಿಂದಿರುಗುವ ರೈಲು ಪ್ರಯಾಣದ ಟಿಕೆಟ್ ಅನ್ನೂ ಆನ್ ಲೈನ್ ಮುಖಾಂತರ ಖರೀದಿಸಿದೆ. ಆದರೆ ಅದು ವ್ಯಟಿಂಗ್ ಲಿಸ್ಟ್ ಟಿಕೆಟ್ ಆಗಿತ್ತು. ಇದರೊಂದಿಗೆ ನಮ್ಮ ತಂಡದ ಸಂಖ್ಯೆ ೩೩ಕ್ಕೆ ಏರಿತು.

No comments:
Post a Comment