’ಜೆಟ್’ - ’ಎಡವಟ್’
ಕ್ಯಾಮೆರಾ ಮ್ಯಾನ್ ಮಹೇಶ್ ಜೊತೆ ಸಹನಾ ಮತ್ತು ವಿದ್ಯಾ ಹೆಗಡೆ - ದೇವನಹಳ್ಳಿ ವಿಮಾನ ನಿಲ್ದಾಣ
ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಂಡು ದಿ.೦೫/೧೦/೨೦೧೧ ರ ಬುಧವಾರ ಕಂಪೆನಿಯಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ೯.೪೦ ರ ಸುಮಾರಿಗೆ ಕಛೇರಿಯಿಂದ ನಿರ್ಗಮಿಸಿ ೧೦.೩೦ಕ್ಕೆ ಗೌರ್ನಮೆಂಟ ಕಾಲೇಜ್ ಬಳಿ ಸೇರಿ ಅಲ್ಲಿಂದ ಹೊರಡಲು ತೀರ್ಮಾನಿಸಿದೆವು. ಅದರಂತೆ ನಾನು ಮನೆಗೆ ಬಂದ ಕೂಡಲೇ ಮಡದಿ ಸಹನಾಗೆ ಬೇಗನೇ ಹೊರಡಲು ಸೂಚನೆ ನೀಡಿದೆ ಮತ್ತು ತಂದೆಯವರಿಗೆ ಕಾರಿನಲ್ಲಿ ಬಿಡಲು ತಿಳಿಸಿದೆ ಜೊತೆಗೆ ನಾನು ಹೊರಡಲು ತಯಾರಾಗಿ ಲಘು ಉಪಹಾರವನ್ನು ಸೇವಿಸಿದೆ ಆಗ ಸಹನಾ "ಹೊರಡುವ ಮೊದಲು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬರೋಣ" ಎಂದಳು ಅದಕ್ಕೆ ಉತ್ತರಿಸಿದ ನಾನು "ಈಗ ನಾವು ಅಲ್ಲಿಗೆ ಹೋಗಿ ದರ್ಶನ ಮಾಡಿಕೊಂಡು ಬರುವ ಹೊತ್ತಿಗೆ ಸಮಯವಾಗುತ್ತದೆ ಆದ್ದರಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬದಲಾಗಿ ಮನೆಯ ಸಮೀಪದಲ್ಲೇ ಇರುವ ವಿಘ್ನ ನಿವಾರಕನ ದೇವಾಲಯಕ್ಕೆ ಹೋಗಿಬರೋಣ" ಎಂದೆ. ಆದರೆ ಅವಳು ಚಾಮುಂಡೇಶ್ವರಿ ದೇವಸ್ಥಾನಕ್ಕೇ ಹೋಗಬೇಕೆಂದು ಚಾಮುಂಡಿ ಅವತಾರವನ್ನೇ ತಾಳಿದ್ದರಿಂದ ಅವಳನ್ನು ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದು ದರ್ಶನ ಮುಗಿಸುವ ಹೊತ್ತಿಗೆ ಸರಿಯಾಗಿ ಪ್ರಸಾದ್ ಮತ್ತು ಕೇಶವ್ ರವರಿಂದ ಮೇಲಿಂದ ಮೇಲೆ ದೂರವಾಣಿ ಕರೆ ಬರತೊಡಗಿದವು. ಇದರಿಂದ ನಾವು ದೇವಸ್ಥಾನದಿಂದ ಆತುರಾತುರವಾಗಿ ಹೊರಟು ಮನೆ ತಲುಪಿ ಅಲ್ಲಿಂದ ಕಾರಿನಲ್ಲಿ ಕಾಲೇಜ್ ಬಳಿ ತಲುಪುವ ಹೊತ್ತಿಗೆ ಘಂಟೆ ೧೧ ಆಗಿತ್ತು. ಆದರೂ ನಮ್ಮ ವಾಹನ ಹೊರಡಲು ಮತ್ತೊಬ್ಬರ ಕೊರತೆ ಇತ್ತು ಅದು - ಶ್ರೀ ಸುಬ್ರಹ್ಮಣ್ಯ ಮತ್ತು ಕುಟುಂಬ. ಅವರನ್ನು ಹೊರಡಿಸಲು ಎಲ್ಲರೂ ಪಟ್ಟ ಪ್ರಯತ್ನ ಮಾತ್ರ ಅಷ್ಟಿಷ್ಟಲ್ಲ ಎಲ್ಲರೂ ಆತುರವಾಗಿ ಬಂದರೂ ಅವರು ಮಾತ್ರ ಬಹಳ ನಿಧಾನವಾಗಿಯೇ ವಾಹನವನ್ನೇರಿದರು. ಆಗ ಸಮಯ ೧೧.೩೦. ಅಲ್ಲಿಂದ ಹೊರಟು ಕ್ಯಾತ್ಸಂದ್ರದಲ್ಲಿ ಷಣ್ಮುಖ್ ಮತು ಕುಟುಂಬದವರನ್ನು ಮತ್ತು ದಾಬಸ್ಪೇಟೆ ಯಲ್ಲಿ ಗಾಯಕ್ವಾಡ್ ರವರ ಪುತ್ರಿ ಶೃತಿ ಬರಮಾಡಿಕೊಂಡು ಮಾರ್ಗದಲ್ಲೇ ಪಲಾವ್ ಮತ್ತು ಬೋಂಡ ವನ್ನು ಉಪಹಾರವಾಗಿ ಸೇವಿಸಿ ೧.೪೫ಕ್ಕೆ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆವು.
ನಂತರದ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳುವ ಸಲುವಾಗಿ ಅಂದರೆ ಬೋರ್ಡಿಂಗ್ ಪಾಸ್ ಪಡೆಯುವುದಕ್ಕೆ ನಾವು "ಜೆಟ್ ಕನೆಕ್ಟ್" (ಜೆಟ್ ಏರ್ವೇಸ್) ಕೌಂಟರ್ ಗೆ ಬಂದಾಗ ಅವರು ಒಂದು ಶಾಕ್ ನೀಡಿದರು. ಅದು - "೩೩ ಜನರಲ್ಲಿ ಸಧ್ಯಕ್ಕೆ ನಾವು ೨೫ ಮಂದಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ ಉಳಿದ ೮ ಮಂದಿಗೆ ನಂತರ ನೋಡೋಣ". ಹೀಗೆ ಹೇಳಿದ್ದು ಜೆಟ್ ಏರ್ವೇಸ್ ನ ಸಿಬ್ಬಂಧಿ ಧನ್ಯಾ. ಇದಕ್ಕೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ ನಾನು "ನಾವು ಆಗಸ್ಟ್ ೩ ನೇ ತಾರೀಖ್ ಅಂದರೆ ೨ ತಿಂಗಳಿಗೆ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದರೂ ಯಾಕೆ ನಮಗೆ ಈ ರೀತಿಯ ತೊಂದರೆ ಎಂದು ಪ್ರಶ್ನಿಸಿ ತಕ್ಷಣವೇ ಕಿಂಗ್ ಫಿಶರ್ ನ ಹೇಮಾಮಾಲಿನಿ ಯನ್ನು ಸಂಪರ್ಕಿಸಿ ಅವರಿಗೆ ಅಲ್ಲಿನ ವಿದ್ಯಮಾನವನ್ನು ತಿಳಿಸಿ ಈ ಬಗ್ಗೆ ಜೆಟ್ ನ ಸಿಬ್ಬಂಧಿಯೊಂದಿಗೆ ಮಾತನಾಡುವಂತೆ ಕೋರಿ, ಮೊಬೈಲ್ ಅನ್ನು ಧನ್ಯಾಗೆ ಕೊಟ್ಟೆ ಈ ಸಂಬಧ ಅವರುಗಳು ಬಹಳ ಸಮಯ ಚರ್ಚಿಸಿದರಾದರೂ ತಕ್ಷಣಕ್ಕೆ ೨೫ ಮಂದಿಗೆ ಮಾತ್ರ ಟಿಕೆಟ್ ನೀಡಿದರು. ನಂತರ ನಾವು ಪಕ್ಕದಲ್ಲೇ ಇದ್ದ ಕಿಂಗ್ ಫಿಶರ್ ನ ಟಿಕೆಟ್ ಬುಕ್ಕಿಂಗ್ ಕೌಂಟರ್ ಗೆ ತೆರಳಿ ಅಲ್ಲಿದ್ದ ಸಿಬ್ಬಂಧಿ ಯಲ್ಲಿ ಒಬ್ಬರಾದ ಬಿಂದ್ಯಾ ರನ್ನು ಭೇಟಿಯಾಗಿ ನಮಗೆ ಉಂಟಾಗಿರುವ ತೊಂದರೆಯನ್ನು ವಿವರಿಸಿದೆವು. ಮತ್ತೆ ನಾನು ಹೇಮಾಮಾಲಿನಿಯನ್ನು ಸಂಪರ್ಕಿಸಿ ಬಿಂದ್ಯಾ ಜೊತೆ ಚರ್ಚಿಸಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ಕೇಳಿದೆ ಇದೆಲ್ಲದರ ನಡುವೆ ಬಿಂದ್ಯಾ ಮತ್ತು ಧನ್ಯಾ ನಡುವೆ ಸಾಕಷ್ಟು ಬಿರುಸಿನ ಮಾತುಕತೆ ನಡೆದಿತ್ತು. ನಂತರ ಹೇಮಾಮಾಲಿನಿಯವರೊಂದಿಗೆ ಮಾತನಾಡುವಂತೆ ತಿಳಿಸಿ ಮೊಬೈಲ್ ಅನ್ನು ಬಿಂದ್ಯಾಗೆ ಕೊಟ್ಟೆ ಸಾಕಷ್ಟು ಚರ್ಚೆ ನಂತರ ಬಿರುಸಿನ ವಿದ್ಯಮಾನಗಳು ನಡೆದು ಎಲ್ಲರಿಗೂ ಟಿಕೆಟ್ ಸಿಗುವ ಮೂಲಕ ಸುಖಾಂತ್ಯ ಕಂಡಿತಾದರೂ ಒಂದು ಹೊಸ ಅನುಭವವನ್ನು ಕೊಟ್ಟಿತು. ವೇಳಾಪಟ್ಟಿಯ ಸಮಯಕ್ಕೆ ಸರಿಯಾಗಿ ಅಂದರೆ ಮೂರು ಘಂಟೆಗೆ ಸರಿಯಾಗಿ ಹೊರಟು ನಾಲ್ಕು ಘಂಟೆಗೆ ಸರಿಯಾಗಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆವು.
ಚಿತ್ರ - ವಿಚಿತ್ರಗಳು:
ದೇವನಹಳ್ಳಿ ವಿಮಾನ ನಿಲ್ದಾಣದ ವಿಹಂಗಮ ನೋಟ
ಸಹನಾ ಜೊತೆ ವಿದ್ಯಾ ಹೆಗಡೆ - ದೇವನಹಳ್ಳಿ ವಿಮಾನ ನಿಲ್ದಾಣ
"ಏ ಫೋಟೋ ಆಮೇಲೆ ತೆಗಿಯಪ್ಪ ಮೊದಲು ಟಿಕೆಟ್ ಕೊಡಿಸು" ಎನ್ನುತ್ತಿರುವ ಮುರಳಿ
ನಮ್ಮ ವಿಮಾನ
ವಿಮಾನದ ಒಳಾಂಗಣ
ವಿಮಾನದಲ್ಲಿ ನಾನು
ಸಹನಾ, ನಾಗಲಕ್ಷ್ಮಿ, ರಮೇಶ್, ಗಾಯಕ್ವಾಡ್ ಮತ್ತು ನಳಿನಿ ಗಾಯಕ್ವಾಡ್
ದೇವನಹಳ್ಳಿ
ಹೈದರಾಬಾದ್ ಬಳಿ ವಿಮಾನ ಇಳಿಯುವ ಹೊತ್ತಿಗೆ
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ
ರಾಜೀವ್ ಗಾಂಧಿ ಅಂತರ್ಷ್ಟೀಯ ಮಿಮಾನ ನಿಲ್ದಾಣ - ಹೈದರಾಬಾದ್.
ವಿಮಾನದ ಟೇಕ್-ಆಫ್ ನ ವಿಡಿಯೋ
No comments:
Post a Comment