Showing posts with label ಅಂತಿಮ ಸಭೆ. Show all posts
Showing posts with label ಅಂತಿಮ ಸಭೆ. Show all posts

Thursday, September 24, 2009

ಪ್ರವಾಸದ ಕಾರ್ಯಕ್ರಮ ಮತ್ತು ಅಂತಿಮ ಸಭೆ

ದಿನಾಂಕ 22.09.09 ರಂದು ಮತ್ತೊಮ್ಮೆ ಸದಸ್ಯರೆಲ್ಲರೂ ಸಭೆ ಸೇರಿದೆವು. ಈ ಮುಂಚೆ ತಿಳಿಸಿದಂತೆ ಪ್ರವಾಸ ಹೊರಡುವ ದಿನದ ರಾತ್ರಿ ಊಟಕ್ಕೆ ಪಾರ್ಸೆಲ್ ಗೆ ಏನೇನು ಆರ್ಡರ್ ಮಾಡುವುದು ಎಂಬ ವಿಚಾರ ಚರ್ಚಿಸಿದಾಗ, ಪಲಾವ್ ಮತ್ತು ಮೊಸರನ್ನ ವನ್ನು ಆರ್ಡರ್ ಮಾಡೋಣ ಎಂದು ತೀರ್ಮಾನಿಸಿದೆವು. ಇನ್ನು ಪ್ರವಾಸ ಕಾರ್ಯಕ್ರಮದ ದಿನಚರಿ ಬಗ್ಗೆ ಚರ್ಚಿಸಿ, ಮೊದಲ ದಿನ (27.09.09) ದಂದು ಗೋವಾದ ಸಮುದ್ರ ತಾಣಗಳನ್ನು ನೋಡಿಕೊಂಡು ಬರುವುದು, ಎರಡನೇ ದಿನ್ (28.09.09) ದಂದು ಗೋವಾದ ಪ್ರಸಿದ್ಧ ದೇವಸ್ಥಾನ, ಚರ್ಚ್ ಮತ್ತು ಇನ್ನಿತರೆ ಪುರಾಣ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡುವುದು ಎಂದು ನಿಶ್ಚಯವಾಯಿತು. ಜೊತೆಗೆ ಪ್ರವಾಸದ ಕೊನೆ ದಿನವಾಗಿರುವ 29.09.09 ರಂದು ಶಿವಮೊಗ್ಗ ಮಾರ್ಗವಾಗಿ ಬಂದು ಜೋಗ್ ಫಾಲ್ಸ್ ನೋಡಿಕೊಂಡು ಬರುವ ಬಗ್ಗೆ ತೀರ್ಮಾನವಾಯಿತು. ಈ ದಿನದ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಕೆಲವರು ಶಿರಸಿ, ಯಾಣಾ ಕ್ಕೆ ಭೇಟಿನೀಡಿ ಹಿಂತಿರುಗುವ ಬಗ್ಗೆ ಸಲಹೆ ನೀಡಿದರು, ಆದರೆ ಯಾಣಾಕ್ಕೆ ಭೇಟಿ ನೀಡಿ ಬರಲು ಸಮಯದ ಅಭಾವವಿರುವುದರಿಂದ ಅದು ಸಾಧ್ಯವಿಲ್ಲ ಎಂದು ತೀರ್ಮಾನಿಸಿದೆವು. ಇನ್ನು ಕೆಲವರು ಗೋಕಾಕ್, ಶಿರಸಿ ಮಾರ್ಗವಾಗಿ ಬರೋಣ ಎಂದರು. ಆದರೆ ಇದಕ್ಕೆ ಒಮ್ಮತ ವ್ಯಕ್ತವಾಗದ ಕಾರಣ ಜೋಗ್ ಫಾಲ್ಸ್ ತಾಣವನ್ನು ಅಂತಿಮಗೊಳಿಸಲಾಯಿತು. ಅದೇ ದಿನ ಸಂಜೆ ಅಂದರೆ ಸಭೆ ಮುಕ್ತಾಯವಾದ ಬಳಿಕ ನಾವು ಈಗಾಗಲೇ ಬುಕ್ ಮಾಡಿರುವ ಪ್ರಾರ್ಥನಾ ಟ್ರಾವೆಲ್ಸ್ ಗೆ ಹೋಗಿ, ವಾಹನ ದೊರಕುವ ಬಗ್ಗೆ ಖಚಿತಪಡಿಸಿಕೊಂಡು ಬರುವುದಾಗಿ ಶಿವರಾಮ್ ಶೆಟ್ಟಿ ಮತ್ತು ರಮೇಶ್ ರವರು ತಿಳಿಸಿದರು. ಇದರೊಂದಿಗೆ ಪ್ರವಾಸ ಕಾರ್ಯಕ್ರಮದ ಅಂತಿಮ ಸಭೆ ಮುಕ್ತಾಯವಾಯಿತು.