Showing posts with label RFC. Show all posts
Showing posts with label RFC. Show all posts

Tuesday, October 18, 2011

ರಾಮೋಜಿ ಫಿಲ್ಮ್ ಸಿಟಿ

ರಾಮೋಜಿಗೆ ಭೇಟಿ - ಗ್ಯಾರಂಟಿ


ಈ ಎಲ್ಲಾ ಬೆಳವಣಿಗೆಯ ನಂತರ ನಾವುಗಳು ರಾಮೋಜಿ ಫಿಲ್ಮ್ ಸಿಟಿ ವೀಕ್ಷಣೆಯ ದಿನಾಂಕ ದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆವು. ನಮ್ಮ ಈ ಹಿಂದಿನ ವೇಳಾಪಟ್ಟಿ ಪ್ರಕಾರ ದಿ.೦೬-೧೦-೨೦೧೧ ರಂದು ರಾಮೋಜಿ ಗೆ ಭೇಟಿ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಈಗಿನ ಬೆಳವಣಿಗೆಯಲ್ಲಿ ಸದಸ್ಯರನೇಕರಿಂದ ಬಂದ ವಿಷಯವೇನೆಂದರೆ ಕೆಲವಷ್ಟು ವೀಕ್ಷಣೀಯ ಸ್ಥಳಗಳಿಗೆ ಶುಕ್ರವಾರದಂದು ರಜೆ ಇರುವುದರಿಂದ ಆ ಸ್ಥಳಗಳಿಗೆ ಗುರುವಾರವೇ ಭೇಟಿ ನೀಡಿ ಶುಕ್ರವಾರದಂದು ರಾಮೋಜಿ ಫಿಲ್ಮ್ ಸಿಟಿ ಗೆ ಭೇಟಿ ಕೊಡಬಹುದು ಎಂಬುದು. ಇದರ ಕುರಿತಾಗಿ ಸಾಕಷ್ಟು ಚರ್ಚೆ, ವಾದ-ವಿವಾದ ದ ನಂತರ ಸಹಮತಕ್ಕೆ ಬಂದ ನಾವು, ಶುಕ್ರವಾರದಂದು ರಜೆಯ ನಿಮಿತ್ತ ಬಂದ್ ಆಗಿರುವ ಸ್ಥಳಗಳನ್ನು ಶನಿವಾರ ವೀಕ್ಷಿಸಬಹುದು ಆದ್ದರಿಂದ ರಾಮೋಜಿ ಫಿಲ್ಮ್ ಸಿಟಿಗೆ ಗುರುವಾರವೇ (ದಿ.೦೬.೧೦.೨೦೧೧) ಭೇಟಿ ಕೊಡೋಣ ಎಂದು. ಇದರ ಹೊರತಾಗಿಯೂ ೩೨ ಸದಸ್ಯರ ತಂಡದಲ್ಲಿ ತೆರಳುತ್ತಿರುವ ನಮಗೆ ರಾಮೋಜಿ ಫಿಲ್ಮ್ ಸಿಟಿ ಯ ಪ್ರವೇಶ ದರದಲ್ಲಿ ರಿಯಾಯಿತಿ ಏನಾದರೂ ಸಿಗುವುದೇನೋ ಎಂಬುದರ ಬಗ್ಗೆ ಸಾಕಷ್ಟು ವಿಚಾರಣೆ ಮಾಡಿದಾಗ ತಿಳಿದ ವಿಚಾರವೆಂದರೆ, ಇದರಲ್ಲಿ ನಮಗೇನೂ ರಿಯಾಯಿತಿ ಇಲ್ಲ ಎಂದು. ಆದ್ದರಿಂದ ಆ ಕೂಡಲೇ ನಾನು ಆನ್ ಲೈನ್ ಮೂಲಕ ೩೨ ಸದಸ್ಯರ ಗುಂಪಿನ ಟಿಕೆಟ್ ಅನ್ನು ಬುಕ್ ಮಾಡಿದೆ. ಇದರೊಂದಿಗೆ ನಮ್ಮ ಹೈದರಾಬಾದ್ ಪ್ರವಾಸದ ವೇಳಾ ಪಟ್ಟಿಯಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಭೇಟಿಯ ದಿನಾಂಕ ಖಾಯಂಗೊಂಡಿತು.