Monday, August 22, 2011

ಪ್ರವಾಸಕ್ಕೆ ಇಲ್ಲ ಅಭಾಸ - ಅಗತ್ಯ ಹಣ ಸಂದಾಯ

ಮತ್ತೊಂದು ಸಭೆ.

ವಿಮಾನ ಮತ್ತು ರೈಲು ಬುಕ್ ಆದ ನಂತರ ಈ ವಿಷಯವನ್ನು ಎಲ್ಲರಿಗೂ ತಿಳಿಸಿ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ೫ನೇ ಆಗಸ್ಟ್ ಸಾಯಂಕಾಲ ಐದು ಘಂಟೆಗೆ ಸಭೆಗೆ ಹಾಜರಾಗುವಂತೆ ಪ್ರತಿಯೊಬ್ಬ ಸದಸ್ಯರಲ್ಲೂ ವಿನಂತಿಸಲಾಗಿ ಎಲ್ಲರೂ ಸರಿಯಾದ ಸಮಯಕ್ಕೆ ಸಭೆ ಹಾಜರಾದರು. ಎಲ್ಲರಿಗೂ ಇಲ್ಲಿಯವರೆಗೂ ನಡೆದ ವಿಷಯವನ್ನೆಲ್ಲಾ ತಿಳಿಸಲಾಯಿತು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಅವರವರ ವೈಯಕ್ತಿಕ ಸಲಹೆ, ಅಭಿಪ್ರಾಯ ಅಥವಾ ಅನುಮಾನಗಳೇನಿದ್ದರೂ ಚರ್ಚಿಸುವಂತೆ ಸೂಚಿಸಲಾಯಿತು. ಅದರಂತೆ ಕೆಲವರು ವಸತಿ ಸೌಲಭ್ಯದ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಬಯಸಿದರು. ಇದಕ್ಕೆ ಉತ್ತರಿಸಿದ ರಮೇಶ್ ರವರು ಈಗಾಗಲೇ ಕಾಚಿಗುಡ ಸಮೀಪ ಇರುವ ಒಂದು ಲಾಡ್ಜ್ ಅನ್ನು ಸಂಪರ್ಕ ಮಾಡಲಾಗಿದ್ದು ಅವರನ್ನು ಪರಿಶ್ಕೃತ ದರ ಪಟ್ಟಿಗಾಗಿ ಕಾಯುತ್ತಿದ್ದೇವೆ ಅವರಿಂದ ಬರುವ ದರ ಪಟ್ಟಿಯನ್ನು ಎಲ್ಲರ ಅವಗಾಹನೆಗೆ ತಂದು ಒಟ್ಟಾರೆ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು ಮತ್ತು ಯಾವುದೇ ವಸತಿ ನಿಲಯವಾದರೂ ಅದನ್ನು ಮುಂಗಡವಾಗಿ ಕಾಯ್ದಿರಸಬೇಕಾಗಿರುವುದರಿಂದ ಮುಂಗಡ ಹಣ ಕೊಡಬೇಕಾಗಿ ಬರುವುದು ಸಹಜ ಪ್ರಕ್ರಿಯೆ ಆದ್ದರಿಂದ ತಿಂಗಳ ವಂತಿಗೆ ಕೊಡದಿರುವ ಮತ್ತು ಹೊಸ ಸದಸ್ಯರುಗಳು ಸ್ವಲ್ಪ ಮಟ್ಟಿನ ಹಣಕಾಸಿನ ಸೌಲಭ್ಯವನ್ನು ಒದಗಿಸಬೇಕೆಂದು ಮನವಿಮಾಡಿಕೊಂಡರು. ಇದಕ್ಕೆ ಮೊದಲು ಸಹಮತ ವ್ಯಕ್ತ ಪಡಿಸಿದ ಷಣ್ಮುಖ್, "ರೈಲು ಬುಂಕಿಂಗ್ ಗಾಗಿ ನನ್ನ ಅಕೌಂಟ್ ನಿಂದ ರೂ.೭,೬೫೦/- ಖರ್ಚಾಗಿದ್ದು, ನೀವು ನನಗೆ ರೂ.೨,೬೫೦/- ಗಳನ್ನು ವಾಪಸ್ ಕೊಡುವ ಮೂಲಕ ನನ್ನಿಂದ ರೂ.೫,೦೦೦/- ಸಂದಾಯವಾದ ರೀತಿಯಲ್ಲಿ ಲೆಕ್ಕ ಪುಸ್ತಕದಲ್ಲಿ ತೋರಿಸಿಕೊಳ್ಳಬಹುದು" ಎಂದರು. ಇದಕ್ಕೆ ನಾನು, ಮಂಜುನಾಥ್, ರಮೇಶ್ ಮತ್ತಿತತರರು ಸಹಮತ ವ್ಯಕ್ತ ಪಡಿಸುವುದರ ಜೊತೆಯಲ್ಲಿ ಅವರ ಸಹಕಾರಕ್ಕೆ ಹರ್ಷ ವ್ಯಕ್ತಪಡಿಸಿದೆವು. ಹೊಸ ಸದಸ್ಯರಲ್ಲಿ ಒಬ್ಬರಾದ ಶೈಲಾ ರವರು ನಾಳೆ ನಾನು ನನ್ನ ಕಡೆಯಿಂದ ರೂ.೪,೦೦೦/- ವನ್ನು ಮತ್ತು ವಿದ್ಯಾರವರು ರೂ.೨,೦೦೦/- ಸಂದಾಯಮಾಡುತ್ತೇನೆಂದು ತಿಳಿಸಿದರು. ಹೆಚ್ಚಿನ ರೀತಿಯಲ್ಲಿ ಪುಳಕಿತರಾದಂತೆ ಕಂಡುಬಂದ ಮುರಳಿಯವರು ನಾನು ರೂ.೧೦,೦೦೦/- ವನ್ನು ಸಂದಾಯ ಮಾಡುತ್ತೇನೆಂದು ತಿಳಿಸಿದರು. ಎಲ್ಲದಿಕ್ಕಿಂತ ಮಿಗಿಲಾಗಿ ನಮ್ಮ ಗಾಯಕ್ವಾಡ್ ರವರೂ ಸಹ ನಾನು ರೂ.೪,೦೦೦/- ವನ್ನು ಸಂದಾಯ ಮಾಡುತ್ತೇನೆ ಎಂದು ತಿಳಿಸಿ ಸಭೆಯಲ್ಲಿ ಹರ್ಷೋಧ್ಗಾರ ಮೂಡಿಸಿ ಸಭೆಯು ಸಂತೋಷದಿಂದ ಭರ್ಕಾಸ್ತುಗೊಳ್ಳುವ ಹಾಗೆ ಮಾಡಿದರು.

Friday, August 19, 2011

ಟ್ರೈನು ಟೆನ್ಶನ್ನು

ಟ್ರೈನಿನಲ್ಲಿ ಸೀಟು ಗ್ಯಾರಂಟಿ

೪ನೇ ತಾರೀಖು ನಾನು ಆಫೀಸ್ ಗೆ ಬಂದ ಕೂಡಲೇ ಎಲ್ಲರಿಗೂ ವಿಮಾನ ಪ್ರಯಾಣದ ಟಿಕೆಟ್ ನನಗೆ ತಲುಪಿರುವುದಾಗಿಯೂ ಮತ್ತು ಸೀಟುಗಳು ಖಚಿತಪಟ್ಟಿರುವುದನ್ನು ತಿಳಿಸಿದಾಗ ಎಲ್ಲರಿಗೂ ಸಂತೋಷವಾಯಿತು. ಇದೇ ಸಂದರ್ಭದಲ್ಲಿ ಷಣ್ಮುಖ್ ದಿನಾಂಕ ೦೮/೧೦/೨೦೧೧ ರ ಪ್ರವಾಸ ನಂತರದ ರೈಲ್ವೇ ಪ್ರಯಾಣವನ್ನೂ ಖಚಿತ ಮಾಡಿಕೊಂಡು ಬಿಡೋಣ ಎಂದರು. ಅದಕ್ಕೆ ಕೆಲವರು ಈಗ ನನ್ನ ಹತ್ತಿರ ಅಷ್ಟು ಹಣ ಇಲ್ಲ ಎಂದಾಗ, ಷಣ್ಮುಖ್ ರವರು "ನಾನೇ ಹಣ ಖರ್ಚು ಮಾಡಿ ಟಿಕೆಟ್ ಬುಕ್ ಮಾಡುತ್ತೇನೆ. ನೀವುಗಳು ಆನಂತರ ಅದನ್ನು ಹಿಂತಿರುಗಿಸಿದರೆ ಸಾಕು" ಎಂದದ್ದಕ್ಕೆ ಎಲ್ಲರೂ ಜೈ ಎಂದರು. ಇದರ ಸಲುವಾಗಿ ಬುಕಿಂಗ್ ಅರ್ಜಿ ತುಂಬಿಕೊಂಡು ಷಣ್ಮುಖ್ ರೈಲ್ವೇ ನಿಲ್ದಾಣದಲ್ಲಿರುವ ಮುಂಗಡ ಬುಕ್ಕಿಂಗ್ ವಿಭಾಗದಲ್ಲಿ ಧಾವಿಸಿ ಅಲ್ಲಿ ವಿಚಾರಿಸಿದಾಗ ಅವರು ಒಟ್ಟು ೩೨ ಪ್ರಯಾಣಿಕರ ಬುಂಕಿಂಗ್ ಅನ್ನು ಒಬ್ಬರೇ ಅರ್ಜಿದಾರರು ಮಾಡುವಂತಿಲ್ಲ ಅದಕ್ಕೆ ೬ ಜನ ಅರ್ಜಿದಾರರು ಬರಬೇಕಾಗುತ್ತದೆ ಅಥವಾ ನೀವು ಇಂಟರ್-ನೆಟ್ ಮುಖಾಂತರ ಮಾಡಬಹುದು ಎಂದು ತಿಳಿಸಿದರು ಎಂದು ಷಣ್ಮುಖ್ ನಮಗೆ ತಿಳಿಸಿ ಮಧ್ಯಾನ್ಹದ ನಂತರ ಬುಕಿಂಗ್ ಮಾಡೋಣ ಎಂದರು. ಅದರಂತೆ ಮದ್ಯಾನ್ಹ ೩ ಘಂಟೆಯ ನಂತರ ಬುಕಿಂಗ್ ಶುರುಮಾಡಿದರು. ಅಂತರ್ಜಾಲದ ವೇಗ ಸ್ವಲ್ಪ ಕಡಿಮೆ ಇದ್ದ ಕಾರಣ ಬುಕಿಂಗ್ ನಿಧಾನಗತಿಯಲ್ಲಿ ನಡೆದಿತ್ತು. ಈ ಮಧ್ಯೆ ಷಣ್ಮುಖ್ ಆಘಾತ ಪಡುವಂತ ಘಟನೆಯೊಂದ ನಡೆಯಿತು ಅದು ಏನೆಂದರೆ ಎಲ್ಲಾ ಟಿಕೇಟ್ ಗಳು ಬುಕ್ ಆಗಿ ಕೊನೆಯ ನಾಲ್ಕು ಮಂದಿ ಗುಂಪಿನ ಟಿಕೆಟ್ ಬುಕ್ ಮಾಡುವಾಗ ಅಂತರ್ಜಾಲದಲ್ಲಿನ ತೊಂದರೆಯಿಂದಾಗಿ ವ್ಯವಹಾರ ಪೂರ್ಣಗೊಳ್ಳಲಿಲ್ಲ (ಟಿಕೆಟ್ ಬುಕ್ ಆಗಲಿಲ್ಲ) ಆದರೆ ಷಣ್ಮುಖ್ ನ ಬ್ಯಾಂಕ್ ಅಕೌಂಟ್ ನಿಂದ ಅಷ್ಟು ಹಣ ಕಡಿತಗೊಂಡಿತ್ತು. " ಈಗ ನಾನು ಏನು ಮಾಡುವುದು" ಎಂದು ಷಣ್ಮುಖ್ ನನ್ನನ್ನು ಕೇಳಿದರು. ಅದಕ್ಕೆ ನಾನು "ಚಿಂತೆ ಮಾಡಬೇಡಿ ಅಷ್ಟು ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಖಂಡಿತ ಬರುತ್ತದೆ. ನನಗೆ ಇಂಥ ಒಂದೆರಡು ಅನುಭವವಾಗಿದೆ. ನೀವು ನಿರ್ಭೀತಿಯಿಂದಿರಿ. ಮತ್ತು ಅಪೂರ್ಣಗೊಂಡಿರುವ ಬುಂಕಿಂಗ್ ಅನ್ನು ಪೂರ್ಣಗೊಳಿಸಿ" ಎಂದೆ. ಅವರು ಚಿಂತಾಕ್ರಾಂತರಾಗಿಯೇ ಅಪೂರ್ಣವಾಗಿದ್ದ ಬುಕಿಂಗ್ ಕಾರ್ಯವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ನಾವುಗಳು ಹೈದರಾಬಾದ್ ನ ಕಾಚಿಗುಡ ರೈಲ್ವೇ ನಿಲ್ದಾಣದಿಂದ ದಿನಾಂಕ ೦೮.೧೦.೧೧ ರ ರಾತ್ರಿ ೦೯.೦೦ ಘಂಟೆಗೆ ಹೊರಟು ದಿ. ೦೯.೧೦.೧೧ ರ ಭಾನುವಾರ ಬೆಳೆಗ್ಗೆ ೧೦.೩೦ಕ್ಕೆ ಯಶವಂತಪುರ ತಲುಪುವುದು ನಿಶ್ಚಿತವಾಯಿತು.

Thursday, August 18, 2011

ಕಿಂಗ್: ಬುಕ್-ಕಿಂಗ್

ಕಿಂಗ್ ನಲ್ಲಿ ಬುಕ್ಕಿಂಗ್

ಸಿದ್ಧಪಡಿಸಿಟ್ಟುಕೊಂಡಿದ್ದ ಅಂತಿಮ ಸದಸ್ಯರ ಪಟ್ಟಿಯನ್ನು ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ ದಿನಾಂಕ: ೦೩/೦೮/೨೦೧೧ ರ ಬುಧವಾರ ಬೆಳೆಗ್ಗೆ ಕಿಂಗ್ ಫಿಶರ್ ಏರ್ಲೈನ್ಸ್ ನ ಬುಕ್ಕಿಂಗ್ ಕಛೇರಿಗೆ ಈ-ಮೇಲ್ ಮಾಡಿದೆ ಮತ್ತು ಈ ಕುರಿತಂತೆ ಅಲ್ಲಿನ ಸಿಬ್ಬಂಧಿ ಹೇಮಾಮಾಲಿನಿಯವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಾಗ ಸೀಮಾ ಅವರ ಸಂಪರ್ಕ ಸಿಕ್ಕಿತು. ಅವರು ಹೇಳಿದ್ದು "ಹೇಮಾಮಾಲಿನಿಯವರು ರಜೆಯಲ್ಲಿದ್ದಾರೆ ಮತ್ತು ಅವರು ವಹಿಸಿಕೊಂಡಿದ್ದ ನಿಮ್ಮ ಬುಕ್ಕಿಂಗ್ ಕಾರ್ಯವನ್ನು ನನಗೆ ವರ್ಗಾವಣೆ ಮಾಡಿದ್ದಾರೆ" ಎಂದು ತಿಳಿಸಿದರು ಮತ್ತು "ನೀವು ಕಳುಹಿಸಿದ್ದ ಸದಸ್ಯರ ಪಟ್ಟಿಯ ಈ ಮೇಲ್ ತಲುಪಿದ್ದು ಎಲ್ಲಾ ತಯಾರಿ ನಡೆಯುತ್ತಿದೆ ಅದು ಮುಗಿದ ಕೂಡಲೇ ನಿಮ್ಮನ್ನು ಸಂಪರ್ಕಿಸಿ ಕ್ರೆಡಿಟ್ ಕಾರ್ಡ್ ನ ವಿವರವನ್ನು ಪಡೆದುಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸುವೆ" ಎಂದು ತಿಳಿಸಿದರು. ಈ ಮಧ್ಯೆ ನಮ್ಮ ಪ್ರವಾಸದ ದಿನಾಂಕ ಮತ್ತು ಒಟ್ಟು ಪ್ರವಾಸದ ದಿವಸ ಇವೆಲ್ಲವನ್ನೂ ನಮ್ಮ ನಿರ್ವಾಹಕ ನಿರ್ದೇಶಕರಿಗೆ (ಎಂ.ಡಿ) ತಿಳಿಸಿ ಅವರಿಂದ ಅನುಮತಿ ಪಡೆದು ಮುಂದುವರೆಯಬೇಕೆಂದು ಕೊಂಡಿದ್ದೆವು. ಆದರೆ ಎಂ.ಡಿ ಯವರಾದ ಶ್ರೀಯುತ. ಎಸ್. ಸಿ.ಉಚ್ಚಿಲ್ ರವರು ಈ ಎಲ್ಲಾ ಮಾಹಿತಿಯನ್ನು ಮುರಳಿಯಿಂದ ಮುಂಚಿತವಾಗಿಯೇ ಪಡೆದುಕೊಂಡಿದ್ದರು ಮತ್ತು ಅವರೇ ಈ ವಿಚಾರವನ್ನು ಪ್ರಸಾದ್ ಜೊತೆ ಚರ್ಚಿಸಿ ದಿನಾಂಕ ಮತ್ತು ದಿವಸವನ್ನು ಖಚಿತ ಪಡಿಸಿಕೊಂಡರು. ಈ ಬೆಳವಣಿಗೆ ನಮಗೆಲ್ಲರಿಗೂ ಸಂತಸವನ್ನುಂಟುಮಾಡಿತು. ಇದೇ ಬೆಳವಣಿಗೆ ನಮ್ಮ ಆಟೋ ವಿಭಾಗದಲ್ಲೂ ಇ.ಡಿ. ಯವರಾದ ಶ್ರೀಯುತ. ಚಂದ್ರಶೇಖರ್ ರವರೂ ಇದಕ್ಕೆ ಸಂತೋಷದಿಂದ ಸಮ್ಮತಿ ಸೂಚಿಸಿದರು. ಆಗಲೇ ಘಂಟೆ ಎರಡಾಗಿತ್ತು ಆದರೂ ಸೀಮಾ ಅವರ ಕಡೆಯಿಂದ ಫೋನ್ ಬರಲಿಲ್ಲ, ೩ ಘಂಟೆಯಿಂದ ನಾನು ಅವರನ್ನು ಸಂಪರ್ಕಿಸಿ ಅವರಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಿ ನಮ್ಮ ಪ್ರಯಾಣವನ್ನು ಭದ್ರಪಡಿಸಿಕೊಳ್ಳೋಣವೆಂದರೆ ಅವರ ಸಂಪರ್ಕ ಸಿಗುತ್ತಿಲ್ಲ. ತಾಂತ್ರಿಕ ನಿರ್ದೇಶಕರಾದ ಶ್ರೀ.ವಿಕಾಸ್ ರವರು  ಈ ಮಾಹಿತಿ ನೀಡಲು ಆತುರದಿಂದ ಕಾಯುತ್ತಿದ್ದರು. ಸತತ ಪ್ರಯತ್ನದ ಫಲವಾಗಿ ೪.೧೫ ರ ಆಸುಪಾಸಿನಲ್ಲಿ ಸೀಮಾರವರೇ ನನ್ನ ಮೊಬೈಲ್ ಗೆ ಫೋನ್ ಮಾಡಿ ಎಂ.ಡಿ. ಅವರ ಕ್ರೆಡಿಟ್ ಕಾರ್ಡ್ ನ ಮಾಹಿತಿಯನ್ನು ವಿಕಾಸ್ ರವರಿಂದ ಪಡೆದುಕೊಂಡು ನಮ್ಮೆಲ್ಲರ ವಿಮಾನ ದಲ್ಲಿನ ಆಸನವನ್ನು ಖಚಿತಪಡಿಸಿದರು. ಸಂಜೆ ಸುಮಾರು ೬ ಘಂಟೆಗೆ ನಮ್ಮೆಲ್ಲರ ಟಿಕೆಟ್ ಅನ್ನು ನನಗೆ ಈ-ಮೇಲ್ ಮಾಡಿದರು. ನಾನು ಅವೆಲ್ಲವನ್ನು ಅವರವರ ಮೇಲ್ ಗೆ ವರ್ಗಾಯಿಸಿ ಸಂಜೆ ೭.೩೦ ಕ್ಕೆ ಸಂತೋಷದಿಂದ ಆಫೀಸ್ ನಿಂದ ಮನೆಗೆ ಹೊರಟೆ.
ತಾಂತ್ರಿಕ ಕಾರಣಕ್ಕಾಗಿ

Wednesday, August 17, 2011

ಪ್ರಯಾಣಿಕರ ಪಟ್ಟಿ

ಪ್ರಯಾಣಿಕರ ಅಂತಿಮ ಪಟ್ಟಿ ಸಿದ್ಧ:



೧. ಮಹೇಶ್


೨. ಸಹನಾ ಮಹೇಶ್


೩. ಸುಬ್ರಹ್ಮಣ್ಯ


೪. ನಾಗಲಕ್ಷ್ಮೀ ಸುಬ್ರಹ್ಮಣ್ಯ


೫. ಸ್ವಾತಿ ಸುಬ್ರಹ್ಮಣ್ಯ


೬. ಗಾಯಕ್ವಾಡ್.ಎಸ್.ಸಿ.ಆರ್


೭. ನಳಿನಿ ಗಾಯಕ್ವಾಡ್


೮. ಶೃತಿ ಸಿ ಗಾಯಕ್ವಾಡ್


೯. ಪೂಜಾ ಸಿ ಗಾಯಕ್ವಾಡ್


೧೦. ರಂಗನಾಥ ಪ್ರಸಾದ್ ಎನ್.ಎಸ್.


೧೧. ಸಿಂಧು.ಬಿ.ಕೆ


೧೨. ಅನನ್ಯ. ಆರ್.


೧೩. ಷಣ್ಮುಖ.ಐ.ಎಲ್.


೧೪. ದಯಾಮಣಿ ಷಣ್ಮುಖ್


೧೫. ರಾಹುಲ್ ಷಣ್ಮುಖ್


೧೬. ಮಂಜುನಾಥ್.ಎಸ್.ವಿ.


೧೭. ಕವಿತಾ ಮಂಜುನಾಥ್


೧೮. ಜಾನ್ಹವಿ ಮಂಜುನಾಥ್.


೧೯. ಶೈಲಜಾ.ಜಿ.ಎಂ


೨೦. ದಿಶಾ ಶೇಖರ್.


೨೧. ವಿದ್ಯಾ ಹೆಗ್ಗಡೆ


೨೨. ಮುರಳೀಧರ್.ಪಿ


೨೩. ಜ್ಯೋತಿ ಮುರಳೀಧರ್


೨೪. ಚಿರಂತ್ ಮುರಳೀಧರ್


೨೫. ಬೆಟ್ಟಪ್ಪ.ಎನ್


೨೬. ರಮೇಶ್ ಉಭಯ್ಕರ್


೨೭. ಕೇಶವ್ ಕುಂಬ್ಳ


೨೮. ರಿತಿಕಾ ಕೆ ಕುಂಬ್ಳ


೨೯. ದೇವಯಾನಿ ಕೆ ಕುಂಬ್ಳ


೩೦. ಶಿವರಾಮ ಶೆಟ್ಟಿ.ಎನ್


೩೧. ಉಮಾ ಶೆಟ್ಟಿ


೩೨. ವಿಕಾಸ್ ಎಸ್ ಉಚ್ಚಿಲ್

Tuesday, August 16, 2011

ಕಿಂಗ್ ಫಿಶರ್ ನಲ್ಲಿ ಹೈದರಾಬಾದ್ ಗೆ




ಕಿಂಗ್ ಫಿಶರ್ ವಿಮಾನದಲ್ಲಿ ಪ್ರಯಾಣಕ್ಕೆ ಅಂತಿಮ ನಿರ್ಧಾರ


ಎಲ್ಲರ ಸ್ನೇಹಪೂರ್ವಕ ಆಗ್ರಹ ಮತ್ತು ಸ್ವ-ಇಚ್ಛೆಯಿಂದ ಕಿಂಗ್ ಫಿಶರ್ ಏರ್ಲೈನ್ಸ್ ನ ಮುಂಗಡ ಬುಕ್ಕಿಂಗ್ ಸಿಬ್ಬಂಧಿಯೊಂದಿಗೆ ದೂರವಾಣಿ ಸಂಪರ್ಕ ಸಾಧಿಸಿದೆ ಮತ್ತು ನಾನು ಸಂಗ್ರಹಿಸಿದ ವಿವರದಂತೆ "ನಮಗೆ ದಿ.೦೫/೧೦/೧೧ ರ ಮದ್ಯಾನ್ಹ ೪.೩೦ಕ್ಕೆ ಬೆಂಗಳೂರಿನಿಂದ ಹೊರಡುವ ಕಿಂಗ್ ಫಿಶರ್ ವಿಮಾನ (ಸಂಖ್ಯೆ: ಐಟಿ-೨೪೩೫) ನಮಗೆ ಸುಮಾರು ೩೦ ಸೀಟುಗಳನ್ನು ಕಾಯ್ದಿರಸಬೇಕಾಗುತ್ತದೆ ಆದ್ದರಿಂದ ಅದಕ್ಕೆ ತಾವು ನಮ್ಮಿಂದ ಬಯಸುವ ವಿವರಗಳೇನು ಮತ್ತು ಗುಂಪಿನಲ್ಲಿ ಮುಂಗಡ ಬುಕ್ಕಿಂಗ್ ಮಾಡುತ್ತಿರುವುದರಿಂದ ನಮಗೆ ನಿಮ್ಮಿಂದ ಸಿಗುವ ರಿಯಾಯಿತಿ ಎಷ್ಟು?" ಎಂಬುದನ್ನು ಪ್ರಶ್ನಿಸಿದೆ. ದಿನಾಂಕ ೩೦/೦೭/೨೦೧೧ ರಂದು ನನಗೆ ಕಿಂಗ್ ಫಿಶರ್ ಸಿಬ್ಬಂಧಿಯವರಿಂದ ಈ-ಮೇಲ್ ಒಂದು ಬಂದಿತ್ತು. ಅದರಲ್ಲಿ ಅವರು ವಿಮಾನ ದರವನ್ನು ರೂ.೧,೮೭೫/- ಎಂದು ನಮೂದಿಸಿದ್ದರು. ಇದರಿಂದ ಆಶ್ಚರ್ಯ ಚಕಿತನಾದ ನಾನು ನನಗೆ ಈ-ಮೇಲ್ ಮಾಡಿದ್ದ ಹೇಮಾಮಾಲಿನಿಯನ್ನು ಸಂಪರ್ಕಿಸಿ ವಿವರಣೆ ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರವೆಂದರೆ "ಆ ವಿಮಾನದಲ್ಲಿರುವ ರೂ.೧,೫೩೦/- ಮೌಲ್ಯದ ಒಟ್ಟು ಸಂಖ್ಯೆ ಕೇವಲ ೧೪ ಆಗಿದ್ದು ಈಗ ಲಭ್ಯವಿರುವ ಈ ದರದ ಸೀಟುಗಳ ಸಂಖ್ಯೆ ಕೇವಲ ೬. ಆದ್ದರಿಂದ ನಾನು ನಿಮಗೆಲ್ಲರಿಗೂ ಮೇಲ್ದರ್ಜೆಯ ಸೀಟುಗಳನ್ನು ರಿಯಾಯಿತಿ ದರವಾದ ರೂ.೧,೮೭೫/- ರಲ್ಲಿ ಒದಗಿಸುತ್ತಿದ್ದೇನೆ" ಎಂದು ತಿಳಿಸಿ ಇದಕ್ಕಾಗಿ ನಾವು ಪ್ರಯಾಣಿಕರ ಹೆಸರು (ಫೋಟೋ ಸಹಿತ ಗುರುತಿನ ಚೀಟಿಯಲ್ಲಿರುವಹಾಗೆ) ನಮೂದಿಸಿ, ಅವರ ಹುಟ್ಟಿದ ದಿನಾಂಕ ದೊಂದಿಗೆ ಅವರಿಗೆ ಕಳುಹಿಸಿದಲ್ಲಿ ಅವರು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಮತ್ತು ಈಗ ನಮೂದು ಮಾಡಿರುವ ಈ ದರ ಕೇವಲ ದಿನಾಂಕ ೦೩/೦೮/೧೧ ರ ಮದ್ಯಾನ್ಹ ೩ ಘಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ ಎಂದರು. ಈ ವಿಷಯವನ್ನು ನಾನು ಎಲ್ಲಾ ಸಹ ಪ್ರಯಾಣಿಕರಲ್ಲಿ ಪ್ರಸ್ತಾಪ ಮಾಡಿದೆ ಅದರಲ್ಲಿ ಕೆಲವರು ಅದಲ್ಲದೇ ಬೇರೆ ವಿಮಾನದಲ್ಲಿ ವಿಚಾರಿಸು ಅಥವಾ ಇನ್ನೊಬ್ಬ ಏಜೆಂಟರ ಮೂಲಕ ವಿವರ ಪಡೆದುಕೊ ಎಂಬಿತ್ಯಾದಿ ಸಲಹೆಗಳನ್ನು ನೀಡಿದರು. ಮುರಳಿ, ಗಾಯಕ್ವಾಡ್, ಸುಬ್ಬಣ್ಣ ಮತ್ತು ಕೆಲವರು ವಿಮಾನದಲ್ಲಿ ಹೋಗುವುದೇ ನಿಜವಂತೆ ಇನ್ನೂರು-ಮುನ್ನೂರು ರೂಪಾಯಿಗೆಲ್ಲಾ ಯಾಕಿಷ್ಟೊಂದು ಚಿಂತೆ ಎನ್ನುವುದರ ಮೂಲಕ ಈ ದರಕ್ಕೂ ನಮ್ಮ ಅಭ್ಯಂತರವಿಲ್ಲ ಎಂಬುದನ್ನು ನೇರವಾಗಿ ಒಪ್ಪಿಕೊಂಡರು. ಆಗ ನಾನು ಮತ್ತೆ ಹೇಮಾಮಾಲಿನಿಯನ್ನು ಸಂಪರ್ಕಿಸಿ ನಮಗೆ ಸಂಜೆ ೫.೩೫ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ ೭ ಘಂಟೆಗೆ ಹೈದರಾಬಾದ್ ತಲುಪುವ ವಿಮಾನ (ಸಂಖ್ಯೆ: ಐಟಿ-೨೪೩೯) ನಲ್ಲಿ ತಗಲಬಹುದಾದ ವೆಚ್ಚದ ಕುರಿತು ಮಾಹಿತಿ ನೀಡುವಂತೆ ಕೇಳಿದೆ. ಏತನ್ಮಧ್ಯೆ ನಾನು ಇತರೆ ಏಜೆಂಟರ ಜೊತೆ ಮತ್ತು ಕಿಂಗ್ ಫಿಶರ್ ಅಲ್ಲದೇ ಇತರೇ ವಿಮಾನಗಳಲ್ಲಿನ ದರ ಕುರಿತ ವಿವರಗಳನ್ನು ಸಂಗ್ರಹಿಸಲು ಶುರುಮಾಡಿದೆ. ಇದೆಲ್ಲವನ್ನೂ ಪರಿಶೀಲಿಸಿದಾಗ ಕಿಂಗ್ ಫಿಶರ್ ನ ಈ ದರವೇ ಕಡಿಮೆ ಖರ್ಚಿನದ್ದಾಗಿ ಕಂಡು ಬಂತು. ಇವೆಲ್ಲದರ ನಡುವೆ ನಾನು ಪ್ರಯಾಣಿಕರ ಅಂತಿಮ ಪಟ್ಟಿ ತಯಾರಿಯಲ್ಲಿ ತೊಡಗಿಕೊಂಡು ಎಲ್ಲರ ಸಂಪೂರ್ಣ ಹೆಸರು ಮತ್ತು ಹುಟ್ಟಿದ ದಿನಾಂಕ ಮತ್ತು ಅವರ ಬಳಿ ಲಭ್ಯವಿರುವ ಫೋಟೋ ಸಹಿತ ಗುರುತಿನ ಚೀಟಿಯ ಮಾಹಿತಿಯನ್ನೂ ಸಂಗ್ರಹಿಸಿದೆ. ಇಷ್ಟರ ನಡುವೆ ನನ್ನ ಗೆಳೆಯ ವಿಮಲಾನಂದ (ಟ್ರಾವೆಲ್ ಏಜೆಂಟ್) ನ ಬಳಿ ಇದರಬಗ್ಗೆ ವಿಚಾರಿಸಿದಾಗ ಅವನು ತನ್ನ ಇನ್ನೊಬ್ಬ ಸ್ನೇಹಿತನ ಬಳಿ ವಿಚಾರಿಸಿ "ಈ ವಿಮಾನದಲ್ಲಿನ ಎಲ್ಲಾ ವರ್ಗದ ಸೀಟುಗಳ ಒಟ್ಟು ಸಂಖ್ಯೆ ೪೬. ಅದರಲ್ಲಿ ಎಕಾನಮಿ ಕ್ಲಾಸ್ (ರೂ.೧,೫೩೦/- ದರದ್ದು) ನ ಸೀಟುಗಳ ಒಟ್ಟು ಸಂಖ್ಯೆ ೧೫. ಆದ್ದರಿಂದ ನಾವು ಗ್ರೂಪ್ ಬುಂಕಿಂಗ್ ಗೆ ಕೇಳಿದಾಗ ಅವರು ಉನ್ನತ ದರ್ಜೆಯ ಸೀಟುಗಳನ್ನು ಕಡಿಮೆ ದರದಲ್ಲಿ ನೀಡುತ್ತಾರೆ" ಎಂದು ತಿಳಿಸಿದ. ಈ ವಿಷಯವನ್ನು ನಾನು ನಮ್ಮ ಎಲ್ಲಾ ಸಹ ಪ್ರಯಾಣಿಕರಿಗೆ ಮತ್ತು ವಿಕಾಸ್ ರವರಿಗೆ ತಿಳಿಸಿದೆ. ಅವರು ತೊಂದರೆ ಇಲ್ಲಾ ಈ ದರದಲ್ಲೇ (ರೂ.೧,೮೭೫/-) ಬುಕಿಂಗ್ ಮಾಡಲು ಕಿಂಗ್ ಫಿಶರ್ ನವರಿಗೆ ತಿಳಿಸಿ ಎಂದು ಹೇಳಿದರು. ಈ ಎಲ್ಲಾ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ೦೧/೦೮/೧೧ ರ ಕೆಲಸದ ಸಮಯವೂ ಮುಗಿದಿತ್ತು.

ಗಾಯಕ್ವಾಡ್ ಗೆ ಹರ್ಷ ತಂದ ವಿಮಾನಯಾನ ಪ್ರಸ್ತಾಪ

ವಿಮಾನ ಪ್ರಯಾಣಕ್ಕೆ ಸಂಪೂರ್ಣ ಸಹಮತ - ತಂಡ ಸೇರಿದ ಗಾಯಕ್ವಾಡ್

ಹಿಂದಿನ ದಿನದ ಸಭೆಯಲ್ಲಿ ಚರ್ಚಿತವಾದ ವಿಷಯಗಳನ್ನು ೨೯ ಜುಲೈ ರಂದು ಕಛೇರಿಗೆ ಹಾಜರಾದ ಕೂಡಲೇ ಸುಬ್ರಹ್ಮಣ್ಯ ಮತ್ತು ಗಾಯಕ್ವಾಡ್ ಇವರ ಸಮ್ಮುಖದಲ್ಲಿ ಚರ್ಚಿಸಿದೆ. ಆರಂಭದಲ್ಲಿ ಸುಬ್ಬಣ್ಣ ನಾಟಕೀಯ ಪ್ರತಿರೋಧ ತೋರಿದನಾದರೂ ನಂತರ ಹಸನ್ಮುಖನಾಗಿ ಸಮ್ಮತಿ ಸೂಚಿಸಿದನು. ರೈಲ್ ನಲ್ಲಿ ಪ್ರಯಾಣಿಸುವುದಾಗಿ ತಿಳಿಸಿದಾಗಲೂ ಅಷ್ಟು ಖುಷಿಯಾಗದ ಗಾಯಕ್ವಾಡ್ ವಿಮಾನ ಪ್ರಯಾಣ ಎಂದ ಕೂಡಲೇ "ವಾವ್!" ಎಂಬ ಹರ್ಷೋದ್ಗಾರದೊಂದಿಗೆ "ನಾನೂ ಕೂಡ ನಮ್ಮ ಇಡೀ ಪರಿವಾರದೊಂದಿಗೆ ಈ ಪ್ರವಾಸಕ್ಕೆ ಬರುತ್ತೇನೆ" ಎಂದು ತಮ್ಮ ಸದಸ್ಯತ್ವವನ್ನು ಖಾಯಂಗೊಳಿಸಿದರು. ಇದೇ ವಿಷಯವನ್ನು ನಾನು ಶೈಲಾ, ವಿದ್ಯಾ ಮತ್ತು ಬೆಟ್ಟಪ್ಪ ಅವರಲ್ಲಿ ಚರ್ಚಿಸಿದಾಗ ಅವರೂ ಕೂಡ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದರು. ಇದನ್ನು ನಾನು ಪ್ರವಾಸದ ಪ್ರತಿಯೊಬ್ಬ ಸದಸ್ಯರಿಗೂ ತಿಳಿಸಿ ಎಲ್ಲರ ಸಹಮತ ಪಡೆದು ವಿಮಾನದ ಸಂಪೂರ್ಣ ವಿವರ ಸಂಗ್ರಹಣಾ ಕಾರ್ಯಕ್ಕೆ ಚಾಲನೆ ಕೊಟ್ಟಿ. ವಿಮಾನ ದರದ ಬಗ್ಗೆ ತಿಳಿಯಲು ಅಂತರ್ಜಾಲದಲ್ಲಿ ಜಾಲಾಡಿದಾಗ ತಿಳಿದುಬಂದದ್ದು ಬೆಂಗಳೂರಿನಿಂದ ಹೈದರಾಬಾದ್ ಗೆ ರೂ.೧,೫೩೦/- ಮತ್ತು ಹೈದರಾಬಾದ್ ಇಂದ ಬೆಂಗಳೂರಿಗೆ ರೂ.೧,೭೮೦/-. ಇದರಿಂದಾಗಿ ನಾನು ಹೋಗುವಾಗ ವಿಮಾನ ಮತ್ತು ಬರುವಾಗ ರೈಲು ಎಂಬ ಪ್ರಸ್ತಾಪವನ್ನು ಬಿಡುವಿನ ಸಮಯದಲ್ಲಿ ಸಭಿಕರ ಮುಂದೆ ಇಟ್ಟಾಗ ಎಲ್ಲರೂ ಅದಕ್ಕೆ ಸಮ್ಮತಿ ಸೂಚಿಸಿದರು. ಆದರೆ ಗಾಯಕ್ವಾಡ್ ಮತ್ತು ಸುಬ್ಬಣ್ಣ ಮಾತ್ರ ಬರುವಾಗ ವಿಮಾನದಲ್ಲಿ ಬರುವುದು ಸೂಕ್ತ ಯಾಕೆಂದರೆ ಪ್ರವಾಸದ ಆಯಾಸವನ್ನೆಲ್ಲಾ ವಿಮಾನಯಾನ ದಲ್ಲಿ ತೀರಿಸಿಕೊಳ್ಳಬಹುದು ಮತ್ತು ಬಹುಬೇಗನೇ ಮನೆ ತಲುಪಿ ಮತ್ತಷ್ಟು ವಿರಾಮ ಪಡೆದು ಮರುದಿನದ ಕಛೇರಿ ಕಾರ್ಯಕ್ಕೆ ನಿರಾಯಾಸವಾಗಿ ಆಗಮಿಸಬಹುದು ಎಂದು. ಆದರೆ ನನ್ನ ವಾದವೇನಿತ್ತೆಂದರೆ, ಹೋಗುವಾಗ ವಿಮಾನದಲ್ಲಿ ಹೋಗುವುದಾದರೆ ರೂ.೨೫೦/- ಖರ್ಚು ಕಡಿಮೆಯಾಗುತ್ತದೆ ಅಲ್ಲದೇ ನಾವು ೫ನೇ ತಾರೀಖಿನ ಸಂಜೆ ಹೈದರಾಬಾದ್ ತಲುಪುವುದರಿಂದ, ದೀರ್ಘವಿರಾಮದೊಂದಿಗೆ ಮರುದಿನದ ನಮ್ಮ ಪ್ರವಾಸಿ ತಾಣಗಳ ಭೇಟಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತದೆ ಮತ್ತು ಸಮಯಾವಕಾಶ ಸಾಕಷ್ಟು ಇರುತ್ತದೆ ಎಂದೆ. ಇದನ್ನು ಎಲ್ಲರೂ ಒಪ್ಪಿ ಮುಂದಿನ ಕಾರ್ಯಗಳನ್ನು ಶುರುಮಾಡುವಂತೆ ನನಗೆ ಸೂಚಿಸಿದರು.

Sunday, August 14, 2011

ವಿಮಾನಯಾನ ಮತ್ತು ಪ್ರವಾಸಕ್ಕೆ ವಿಕಾಸ್

ವಿಮಾನ ಪ್ರಯಾಣದ ಪ್ರಸ್ತಾಪ ಮತ್ತು ಪ್ರವಾಸಕ್ಕೆ ವಿಕಾಸ್ ರವರ ಹಾಜರಿ
೨೮-ಜುಲೈ-೨೦೧೧ ರ ಸಂಜೆ ೫.೧೦ ಕ್ಕೆ ಕರೆದಿದ್ದ ಪ್ರವಾಸಿಗರ ಸಭೆಯಲ್ಲಿ ಚರ್ಚಿಸುವ ಸಲುವಾಗಿ, ನಾನು ಸಿದ್ಧಪಡಿಸಿಟ್ಟುಕೊಂಡಿದ್ದ ರೈಲು ಮತ್ತು ಬಸ್ಸಿನ ವೇಳಾಪಟ್ಟಿ ವಿವರ ಮತ್ತು ದರ ವಿವರವನ್ನು ತೆಗೆದುಕೊಂಡು ಸಭಾಲಯಕ್ಕೆ ಹೊರಟೆವು. ಈ ಬಾರಿ ಸಭೆಯು ನಮ್ಮ ತಾಂತ್ರಿಕ ನಿರ್ದೇಶಕರಾದ ವಿಕಾಸ್ ರವರ ರೂಮಿನಲ್ಲಿ ಅವರ ಅನುಪಸ್ಥಿತಿಯಲ್ಲಿ ನಡೆದಿತ್ತು. ನಾನು ಪ್ರಸ್ತುತ ಪಡಿಸಿದ ರೈಲಿನ ವೇಳಾಪಟ್ಟಿ ಮತ್ತು ದರ ನಮಗೆ ಅನುಕೂಲಕರವಾಗಿದ್ದು ನಾವು ಬೆಂಗಳೂರಿನಿಂದ ೫ನೇ ಅಕ್ಟೋಬರ್ ಸಂಜೆ ೪.೧೫ಕ್ಕೆ ಹೊರಡುವ ಮತ್ತು ೦೮ನೇ ಅಕ್ಟೋಬರ್ ರಾತ್ರಿ ೯ಕ್ಕೆ ಹೊರಡುವ ರೈಲನ್ನು ಪ್ರಯಾಣಿಕರ ಅಂತಿಮ ಪಟ್ಟಿಯೊಂದಿಗೆ ಕಾಯ್ದಿರಿಸುವ ಸಲುವಾಗಿ ಗಹನಾವಾದ ಚರ್ಚೆ ನಡೆದಿತ್ತು. ಈ ಸಭೆಗೆ ನಾವುಗಳು ಷಣ್ಮುಖ್ ರವರನ್ನು ಬಲವಂತದಿಂದ ಕರೆದು ತಂದಿದ್ದೆವು. ಚರ್ಚೆಯ ನಡುವೆ ತಮ್ಮ ಕಾರ್ಯಾಲಯಕ್ಕೆ ಆಗಮಿಸಿದ ವಿಕಾಸ್ ರವರು ನಮ್ಮ ಪ್ರವಾಸದ ಲಘುವಿವರ ಪಡೆದುಕೊಂಡರು. ಈ ಚರ್ಚೆಯ ನಡುವೆಯೇ ವಿಕಾಸ್ ರವರಿಂದ ಒಂದು ಅನಿರೀಕ್ಷಿತ ಮತ್ತು ಆಶಾದಾಯಕ ಅಂಶ ಹೊರಬಿತ್ತು ಅದೆಂದರೆ - "ವಿಮಾನಯಾನ". ಇದಕ್ಕೆ ಪ್ರಾರಂಭದಲ್ಲಿ ಎಲ್ಲರೂ ಇದು ನಮ್ಮಂತವರಿಗಲ್ಲ ಬಿಡಿ ಸ್ವಾಮಿ ಎಂಬ ಮಾತನಾಡಿದಾಗ ಅವರು ಇಲ್ಲಾ ಬೆಂಗಳೂರಿನಿಂದ ಹೈದರಾಬಾದ್ ಗೆ ವಿಮಾನದರ ಕೊಂಚ ಕಡಿಮೆ ಇದೆ. ಸ್ವಲ್ಪ ತಡೆಯಿರಿ, ನಾನು ಇಂಟರ್ನೆಟ್ ನಲ್ಲಿ ನೋಡುತ್ತೇನೆ ಎಂದು ತಮ್ಮ ಲ್ಯಾಪ್ ಟಾಪ್ ಆನ್ ಮಾಡಿದಾಗ ನಾನು ಹೇಳಿದೆ "ಇಲ್ಲ ಬಿಡಿ ಸರ್ವರ್ ಆಫ್ ಮಾಡಿ ಬಂದಿದ್ದೇನೆ". ಆವಾಗ ಅವರು ತಮ್ಮ ಹೊಸ ಮೊಬೈಲ್ ಆದ ಸೋನಿ ಎರಿಕ್ಸನ್ - ಎಕ್ಸ್ಪೀರಿಯಾ - ಎಕ್ಸ್-೧೦ ಮೊಬೈಲ್ ನಲಿ ಬ್ರೌಸ್ ಮಾಡಿ "ಕಿಂಗ್ ಫಿಶರ್ ಏರ್ಲೈನ್ಸ್ ನಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಗೆ ದರ ಕೇವಲ ರೂ.೧,೫೩೦/-" ಎಂದು ತಿಳಿಸಿದರು. ಇದನ್ನು ಪ್ರಾರಂಭದಲ್ಲಿ ನಂಬದ ನಾವು ವಿಕಾಸ್ ರವರ ಕೈಯಿಂದ ಅವರ ಮೊಬೈಲ್ ಅನ್ನು ತೆಗೆದುಕೊಂಡು ಅವರು ಹೇಳಿದ್ದ ದರವನ್ನು ಖಚಿತಪಡಿಸಿಕೊಂಡೆವು. ಇದರಿಂದ ಉದ್ಗಾರಗೊಂಡ ಮುರಳಿ "ಹಾಗಿದ್ದರೆ ಹಾಗೇ ಆಗಲಿ. ನಾನು ನಮ್ಮ ಮನೆಯವರಿಗೂ ವಿಮಾನಯಾನ ಮಾಡಿಸಿದ ಸಂತೋಷ ಸಿಗುತ್ತದೆ. ಒಂದು ಬಾರಿಯಾದರೂ ಕುಟುಂಬ ಸಮೇತ ವಿಮಾನ ಪ್ರಯಾಣ ಮಾಡಿದ ಕೀರ್ತಿಯೂ ಸಿಗುತ್ತದೆ" ಎಂದರು. ಇದಕ್ಕೆ ಅಂದಿನ ಸಭೆಯಲ್ಲಿ ಹಾಜರಿದ್ದ ಕೇಶವ್, ನಾನು, ಪ್ರಸಾದ್, ಮಂಜುನಾಥ್, ಬೆಟ್ಟಪ್ಪ ಸಂಪೂರ್ಣ ಸಹಮತಿ ವ್ಯಕ್ತ ಪಡಿಸಿದರು ಸಭೆಯಲ್ಲಿ ಹಾಜರಿದ್ದ ಮತ್ತೊಬ್ಬ ಪ್ರಮುಖ ವ್ಯಕ್ತಿ ರಮೇಶ್ ರವರು ಕೊಂಚ ತಡವಾಗಿ ಅರೆ ಮನಸ್ಸಿನಿಂದ ಒಪ್ಪಿಕೊಂಡರಾದರೂ ನಂತರ ಹೃದಯಪೂರ್ವಕವಾಗಿ ಬಹುಮತದತ್ತ ಹೆಜ್ಜೆ ಹಾಕುವುದರೊಂದಿಗೆ ನಮಗೆ ಸಂತೋಷವನ್ನುಂಟು ಮಾಡಿದರು. ಆದರೆ ಷಣ್ಮುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ನಿರಮ್ಮಳವಾಗಿ ಕುಳಿತಿದ್ದರು. ಇದೇ ಸಭೆಯಲ್ಲಿ ಮತ್ತೊಂದು ಆಶ್ಚರ್ಯಕರವಾದ ಮತ್ತು ಸಂತೋಷಕರವಾದ ಸಂಗತಿಯೊಂದನ್ನು ವಿಕಾಸ್ ರವರು ನಮ್ಮ ಗಮನಕ್ಕೆ ತಂದರು. ಅದೆಂದರೆ, ಈ ಬಾರಿಯ ಪ್ರವಾಸಕ್ಕೆ ವಿಕಾಸ್ ರವರೂ ಸಹಾ ನಮ್ಮ ಜೊತೆ ಬರಲಿದ್ದಾರೆ ಎನ್ನುವುದು. ಇದು ಉಳಿದ ಸದಸ್ಯರ ಸಂತೋಷವನ್ನು ನೂರ್ಮಡಿಗೊಳಿಸಿತು. ಇಂದು ಚರ್ಚೆಯಾದ ಎಲ್ಲಾ ವಿಷಯಗಳ (ಎಲ್ಲಕ್ಕಿಂತ ಮಿಗಿಲಾಗಿ ವಿಮಾನಯಾನ) ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕು ಮತ್ತು ಉಳಿದ ಸದಸ್ಯರುಗಳ (ಎಲ್ಲರಿಗಿಂತ ಮುಖ್ಯವಾಗಿ ನಮ್ಮ ಸುಬ್ಬಣ್ಣನ ಮತ್ತು "ಗಂಗೆ-ಗೌರಿ"ಯರ) ಒಪ್ಪಿಗೆಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳೋಣ ಎಂದು ತೀರ್ಮಾನಿಸಿ ಸಭೆಯನ್ನು ಅಂತ್ಯಗೊಳಿಸಿದೆವು.