Monday, September 7, 2009
ವಾಸ ಸ್ಥಳ
ಇನ್ನು ವಾಸ ಸ್ಥಳದ ಬಗ್ಗೆ ಹೇಳಬೇಕು. ಪ್ರವಾಸದ ವ್ಯವಸ್ಥಾಪಕರಾದ ಷಣ್ಮುಖ್ ರವರು ಗೋವಾದ ಡೋಲ್ರಿನಾ ವೆಗಟೋರ್ ನ ಮಾಲೀಕರಾದ ಕಾನ್ಯೂಟೇ ರವರನ್ನು ಫೋನ್ ಮತ್ತು ಈ-ಮೇಲ್ ಮೂಲಕ ಸಂಪರ್ಕಿಸಿ ಅಲ್ಲಿನ ವ್ಯವಸ್ಥೆ,ರೂಮ್ ನ ದರ ಮತ್ತು ಅಲ್ಲಿರುವ ರೂಮುಗಳ ಸಂಖ್ಯೆ ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕಾನ್ಯೂಟೇ ಅವರು ಡೋಲ್ರಿನಾ ವೆಗಟೋರ್ ಪಣಜಿಯಿಂದ ಸುಮಾರು 21 ಕಿ.ಮೀ. ಗಳಷ್ಟು ದೂರದಲ್ಲಿದ್ದು ಮತ್ತು ಕಲಂಗೂಟ್ ಬೀಚ್ ಗೆ ಸುಮಾರು 8 ಕಿ.ಮೀ. ಗಳಷ್ಟು ಹತ್ತಿರವಿದ್ದು ಅವರಲ್ಲಿ ಐದು ಜನ ತಂಗಬಹುದಾದಂತಹ 2 ರೂಮುಗಳಿದ್ದು ಇಬ್ಬರು ತಂಗಬಹುದಾದಂತಹ 8 ರೂಮುಗಳಿವೆ ಎಂದು ತಿಳಿಸಿದರು. ನಂತರ ಷಣ್ಮುಖ್ ಸಂಬಂಧ ಪಟ್ಟ ಇತರೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಐದು ಜನಕ್ಕೆ ವ್ಯವಸ್ಥಿತವಾಗಿರುವ 2 ರೂಮುಗಳನ್ನೂ ಮತ್ತು ಎರಡು ಜನಕ್ಕೆ ವ್ಯವಸ್ಥಿತವಾಗಿರುವ 3 ಮೂರು ರೂಮುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಲು ತೀರ್ಮಾನಿಸಿ ಈ ಸಂಬಂಧ ಕಾನ್ಯೂಟೇ ಅವರೊಂದಿಗೆ ಈ-ಮೇಲ್ ಮೂಲಕ ಸಂಪರ್ಕಿಸಿ ಮೇಲೆ ತಿಳಿಸಿಲಾಗಿರುವಷ್ಟು ರೂಮುಗಳನ್ನು ನಮಗಾಗಿ ಕಾಯ್ದಿರಿಸಲು ತಿಳಿಸಿದರು. ಇದಕ್ಕೆ ಈ-ಮೇಲ್ ಮೂಲಕ ಇಂದು ಉತ್ತರಿಸಿದ ಕಾನ್ಯೂಟೇ ನಮಗಾಗಿ ಈ ರೂಮುಗಳನ್ನು ಕಾಯ್ದಿರಿಸಿರುವುದಾಗಿ ತಿಳಿಸಿದರು.
Labels:
ವಾಸ
Subscribe to:
Post Comments (Atom)
No comments:
Post a Comment