Thursday, September 10, 2009

ತಂಗುದಾಣದ ಬದಲಾವಣೆ

ಇತ್ತೀಚಿನ ಮಾಹಿತಿ... ಶ್ರೀಯುತ ರಮೇಶ್ ರವರು ಷಣ್ಮುಖ್ ರವರನ್ನು ಸಂಪರ್ಕಿಸಿ, "ನಾನು ನಮ್ಮ ಸಂಸ್ಥೆಯ ಸಹೋದ್ಯೋಗಿಗಳು ಈ ಮುಂಚೆ ಗೋವಾಗೆ ಹೋದಾಗಲೆಲ್ಲಾ ತಂಗುತ್ತಿದ್ದ ಗೆಸ್ಟ್ ಹೌಸ ಮಾಲೀಕರೊಂದಿಗೆ ಅಲ್ಲಿ ನಾವುಗಳು ಭೇಟಿ ನೀಡಲಿರುವ ದಿನದಂದು ರೂಮುಗಳು ದೊರಕಲಿವೆಯೆ? ಎಂದು ವಿಚಾರಿಸಿ ಅಲ್ಲಿ ರೂಮುಗಳ ದೊರಕುವಿಕೆಯನ್ನು ಖಚಿತ ಪಡಿಸಿಕೊಂಡೆ, ಜೊತೆಗೆ ಕೇಶವ್ ರವರ ಸಂಬಂಧಿಕರೊಬ್ಬರು ಇತ್ತೀಚೆಗೆ ಅಲ್ಲಿಗೆ ಹೋಗಿದ್ದರು ಅವರು ಅಲ್ಲಿನ ದೂರವಾಣಿ ಸಂಖ್ಯೆಯನ್ನು ನಮಗೆ ನೀಡಿದರು ಜೊತೆಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಮುಂಚೆ ಕಾಯ್ದಿರಿಸಿದ್ದ ಡೋಲ್ರಿನಾ ವೆಗಟೊರ್ ಗೆಸ್ಟ್ ಹೌಸ್ ನ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುವುದು ಸೂಕ್ತ" ಎಂದು ಹೇಳಿದರು. ಅದಕ್ಕೆ ಅವರು ನೀಡಿದ ಸಮಜಾಯಿಶಿಗಳು ಈ ಕೆಳಕಂಡಂತಿವೆ.
ಈಗಾಗಲೇ ಕಾಯ್ದಿರಿಸಿರುವ ತಂಗುದಾಣ ಕಲಂಗಾಟ್ ಸಮುದ್ರ ತೀರದಿಂದ ಸುಮಾರು ೮ ಕೀ.ಮೀ.ಗಳಷ್ಟು ದೂರವಿರುವುದರಿಂದ ಸಮುದ್ರ ತೀರದ ಸಮೀಪದಲ್ಲಿ ತಂಗಿದ ಅನುಭವದಿಂದ ವಂಚಿತರಾಗುತ್ತೇವೆ.
ಈಗ ಕಾಯ್ದಿರಸಬೇಕೆಂದುಕೊಂಡಿರುವ ಗೆಸ್ಟ್ ಹೌಸ್ ಸಮುದ್ರ ತೀರದ ಪಕ್ಕದಲ್ಲೇ ಇದೆ.
ಈಗ ಕಾಯ್ದಿರಿಸಲು ಹೊರಟಿರುವ ತಂಗುದಾಣದ ರೂಮುಗಳ ದರ ಡೋಲ್ರಿನಾ ಕ್ಕೆ ಹೋಲಿಸಿದಲ್ಲಿ ತುಸು ಕಡಿಮೆ.
ಈಗ ಬುಕ್ ಮಾಡಲು ನಿರ್ಧರಿಸಿರುವ ಗೆಸ್ಟ್ ಹೌಸ್ ನಲ್ಲಿ ಊಟದ ವ್ಯವಸ್ಥೆ ಕೂಡಾ ಇದೆ ಜೋತೆಗೆ ಅದರ ಮಾಲೀಕ ಆಂಟೋನಿ ರಮೇಶ್ ರವರಿಗೆ ಪರಿಚಿತ.

ಇದಕ್ಕೆ ಉತ್ತರಿಸಿದ ಷಣ್ಮುಖ್ " ಸರಿ, ನಾವುಗಳು ಉಳಿದ ಸದಸ್ಯರ ಜೊತೆ ಮಾತನಾಡಿ ನಂತರ ತೀರ್ಮಾನ ತೆಗೆದುಕೊಳ್ಳೋಣ" ಎಂದರು

No comments:

Post a Comment