Saturday, August 13, 2011

ಹೈದರಾಬಾದ್ ಪ್ರವಾಸದ ಇಂಗಿತ


ಹೈದರಾಬಾದ್ ಪ್ರವಾಸಕ್ಕೆ ತಾತ್ಕಾಲಿಕ ಒಮ್ಮತ



ಜುಲೈ ತಿಂಗಳ ಮಧ್ಯದಲ್ಲಿ ಡಿಸೈನ್ ಸುಬ್ರಹ್ಮಣ್ಯ ನ ಕಟು ಒತ್ತಾಯದ ಮೇರೆಗೆ ಸುಬ್ಬಣ್ಣನವರ ಅನುಪಸ್ಥಿತಿಯಲ್ಲಿ ಸಭೆ ಸೇರಿದಾಗ ಕೇಳಿ ಬಂದ ವಿಚಾರವೆಂದರೆ, ಕೇರಳ ಪ್ರವಾಸ ಕೈಬಿಟ್ಟು ಬೇರೆ ಸ್ಥಳದ ಬಗ್ಗೆ ಆದಷ್ಟು ಬೇಗ ಒಮ್ಮತಕ್ಕೆ ಬಂದು ಮುಂಜಾಗರೂಕತೆಯಿಂದ ಎಲ್ಲಾ ಪ್ರಕ್ರಿಯಿಯೆಯನ್ನು ಪೂರ್ಣಗೊಳಿಸಿಕೊಳ್ಳುವ ನಿರ್ದಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ರಮೇಶ್ ರವರು ಎರಡು ಸ್ಥಳಗಳನ್ನು ಹೆಸರಿಸಿ ಆಯ್ಕೆಯನ್ನು ಉಳಿದ ಸ್ನೇಹಿತರಿಗೆ ಬಿಟ್ಟು ಕೊಟ್ಟರು. ಅವರು ಪ್ರಸ್ತಾಪಿಸಿದ ಸ್ಥಳಗಳೆಂದರೆ

೧: ಉತ್ತರ ಕರ್ನಾಟಕದ ಯಲ್ಲಾಪುರ ಮತ್ತು ೨: ಹೈದರಬಾದ್.

ಈ ಎರಡೂ ಸ್ಥಳಗಳೂ ನಮ್ಮ ಕಳೆದ ಸಾಲಿನ ಪ್ರವಾಸ ಸಭೆಯಲ್ಲಿ ಕೇಳಿಬಂದ ಸ್ಥಳಗಳಾಗಿದ್ದು, ಕಳೆದ ಸಾರಿಯ ಸಮಯದ ಅಭಾವದಿಂದ ಈ ಸ್ಥಳಗಳನ್ನು ವೀಕ್ಷಿಸುವ ಅವಕಾಶವಾಗಿರಲಿಲ್ಲ. ಈ ಬಾರಿ ಬಹು ಮುಂಚಿತವಾಗಿ ಸ್ಥಳದ ಹೆಸರು ಕೇಳಿಬಂದ ಕಾರಣ ಮತ್ತು ತ್ವರಿತವಾಗಿ ಇತ್ಯರ್ಥವಾಗಬೇಕಾಗಿದ್ದ ಕಾರಣ. ಸಭಿಕರೆಲ್ಲರೂ ಹೈದರಾಬಾದ್ ಪ್ರದೇಶವನ್ನೇ ಆಯ್ಕೆಮಾಡಿದರು. ಸುಬ್ರಹ್ಮಣ್ಯನ ಅನುಪಸ್ಥಿತಿಯಲ್ಲಿ ಈ ಆಯ್ಕೆ ನಡೆದುದಕ್ಕೆ ಸಭಿಕರಲ್ಲಿ ಸ್ವಲ್ಪ ಮಟ್ಟಿನ ಅಳುಕು ಇತ್ತಾದರೂ, ಸುಬ್ಬಣ್ಣ ಖುದ್ದಾಗಿ ನನ್ನ ಬಳಿ "ನಾನು ಸಭೆಗೆ ಬರಲು ಸಾಧ್ಯವಿಲ್ಲ, ಆದರೆ ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ" ಎಂದು ಹೇಳಿದ್ದ ಮಾತು ನನಗೆ ಸ್ವಲ್ಪ ಮಟ್ಟಿನ ಧೈರ್ಯ ತುಂಬಿತ್ತು. ಸಭೆಯಲ್ಲಿ ಹಾಜರಿದ್ದ, ಶ್ರೀ.ಕೇಶವ್ ಕುಂಬ್ಳ, ಶ್ರೀ. ರಮೇಶ್, ಶ್ರೀ. ಮುರಳೀಧರ್, ಶ್ರೀ. ಪ್ರಸಾದ್, ಶ್ರೀ. ಮಂಜುನಾಥ್, ಶ್ರೀ. ಬೆಟ್ಟಪ್ಪ ಮತ್ತು ಇತರರು ಇದಕ್ಕೆ ತಾತ್ಕಾಲಿಕ ಒಪ್ಪಿಗೆ ಸೂಚಿಸಿದರು. ಆಗ ಪ್ರಸ್ತಾಪವಾದ ಮತ್ತೊಂದು ಸಂಗತಿಯೆಂದರೆ ಇಲ್ಲಿಂದ (ತುಮಕೂರು / ಬೆಂಗಳೂರಿನಿಂದ) ಹೈದರಾಬಾದ್ ಗೆ ಹೋಗುವುದು ಮತ್ತು ಬರುವುದು ಟ್ರೈನ್ ನಲ್ಲಿ ಮತ್ತು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅಲ್ಲಿ ಲಭ್ಯವಿರುವ ವಾಹನ ಉಪಯೋಗಿಸಿಕೊಳ್ಳೂವ ಬಗ್ಗೆ ಒಮ್ಮತಕ್ಕೆ ಬರಲಾಯಿತು. ಇದಕ್ಕೆ ಕಾರಣ ಪ್ರಯಾಣದ ಖರ್ಚು ವೆಚ್ಚ ಕಡಿಮೆ ಎಂಬ ವಿಷಯ. ಈ ಸಂಬಂಧ ದಿ. ೦೫.೧೦.೨೦೧೧ ಬುಧವಾರ ಮತ್ತು ದಿ. ೦೮ / ೦೯.೦೫.೨೦೧೧ ರಂದು ಲಭ್ಯವಿರುವ ಟ್ರೈನ್ ಗಳ ವಿವರ ಮತ್ತು ವೆಚ್ಚದ ಬಗ್ಗೆ ತಿಳಿದುಕೊಂಡು ಮರುದಿನ ಮತ್ತೆ ಸಭೆ ಸೇರುವ ನಿರ್ಧಾರದೊಂದಿಗೆ ಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

No comments:

Post a Comment