Wednesday, September 16, 2009
ಇಂದು ಮತ್ತೊಂದು ಸಭೆ
ಷಣ್ಮುಖ್ ರವರು ಇಂದು ಅಂದರೆ ದಿನಾಂಕ 16.09.2009 ರಂದು ಸಂಜೆ 5 ಗಂಟೆಗೆ ಸಭೆ ಏರ್ಪದಿಸಿರುವುದಾಗಿ ತಿಳಿಸಿ ಸದಸ್ಯರೆಲ್ಲರನ್ನೂ ತಪ್ಪದೇ ಸಭೆಗೆ ಹಾಜರಾಗುವಂತೆ ಆಮಂತ್ರಿಸಿದರು. ಅವರ ಈ ಆಮಂತ್ರಣಕ್ಕೆ ಸಮ್ಮತಿಸಿದ ಎಲ್ಲಾ ಸದಸ್ಯರೂ, ನಾವುಗಳು ತಪ್ಪದೇ ಸಭೆಗೆ ಹಾಜರಾಗುವೆವು ಎಂದು ತಿಳಿಸಿದರು. ಕೆಲವು ಸದಸ್ಯರು ತಮಗೆ ಸಂಜೆ ಸ್ವಲ್ಪ ಮುಖ್ಯವಾದ ಕೆಲಸವಿರುವುದರಿಂದ ಸಭೆಯ ಕಾಲಾವಕಾಶವನ್ನು ಕೊಂಚ ಕಡಿಮೆ ಮಾಡಿ ಸಾಧ್ಯವಾದಷ್ಟು ಬೇಗ ಸಭೆಯನ್ನು ಮುಕ್ತಾಯ ಮಾಡಬೇಕೆಂದು ಷಣ್ಮುಖ್ ರವರಲ್ಲಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಷಣ್ಮುಖ್ "ಹೌದು, ನಮಗೂ ಇದರ ಅರಿವು ಇದೆ, ಅಲ್ಲದೇ ನನಗೂ ಕೊಂಚ ಕೆಲಸವಿರುವುದರಿಂದ ಸಭೆಯನ್ನು ಸಾಧ್ಯವಾದಷ್ಟು ಬೇಗ ಮುಕ್ತಾಯಗೊಳಿಸುತ್ತೇನೆ" ಎಂದು ಉತ್ತರಿಸಿದರು.
Labels:
ಇಂದಿನ ಸಭೆ
Subscribe to:
Post Comments (Atom)
No comments:
Post a Comment