Thursday, September 17, 2009
ಸಭೆ ಮುಂದೂಡಿಕೆ
ಈ ಹಿಂದೆ ತಿಳಿಸಿದಂತೆ ಇಂದು ಸಂಜೆ ಕರೆಯಲಾಗಿದ್ದ ಸಭಾಸ್ಥಳಕ್ಕೆ ಹೋದ ನಮಗೆಲ್ಲರಿಗೂ ನಿರಾಶೆ ಕಾದಿತ್ತು. ಸಭೆಗೆ ಬಹು ಮುಖ್ಯ ಸದಸ್ಯರುಗಳಾದ ಶ್ರೀಯುತ. ಶಿವರಾಮ ಶೆಟ್ಟಿ, ಶ್ರೀಯುತ. ಪಾರ್ಥಸಾರಥಿ, ಶ್ರೀಯುತ. ಮುರಳೀಧರ್ ಮತ್ತು ಶ್ರೀಯುತ. ಸುಬ್ರಹ್ಮಣ್ಯ ಇವರುಗಳ ಹಾಜರಾತಿ ಇರದ ಕಾರಣ ಸಭೆಯನ್ನು ನಾಳೆಗೆ ಮುಂದೂಡಲಾಯಿತು. ಈ ಎಲ್ಲಾ ಸದಸ್ಯರುಗಳು ಕಂಪೆನಿಯ ಬಹು ಮುಖ್ಯ ಕಾರ್ಯದಲ್ಲಿ ನಿರತರಾಗಿದ್ದರಿಂದ ಸಭಾಕಾರ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ಸುದ್ಧಿ ತಿಳಿಯಿತು. ಇಂಥ ಪ್ರಮುಖರ ಅನುಪಸ್ಥಿತಿಯಲ್ಲಿ ಸಭೆ ನಡೆಸುವುದು ಸೂಕ್ತವಲ್ಲ ಎಂಬ ಕಾರಣದಿಂದ ಸಭೆಯನ್ನು ನಾಳೆ (17.09.2009) ಗೆ ಮುಂದೂಡುವ ನಿರ್ಧಾರ ಕೈಗೊಳ್ಳಲಾಯಿತು. ಈ ದಿನವಾದರೂ ಸಭೆ ಸುಸೂತ್ರವಾಗಿ ನಡೆಯಲಿದೆ ಎಂಬ ಆಶಾವಾದವಿದೆ.
Labels:
ಮುಂದೂಡಿಕೆ
Subscribe to:
Post Comments (Atom)
No comments:
Post a Comment