Saturday, September 19, 2009

ಸಭೆಯ ಸಂಪೂರ್ಣ ವಿವರ

ದಿನಾಂಕ 17.09.2009 ರ ಸಂಜೆ ಐದು ಘಂಟೆಗೆ ಸಭೆ ಸೇರಿದ ನಮ್ಮೆಲ್ಲರ ಸಮ್ಮುಖದಲ್ಲಿ (ಸದಸ್ಯರಾದ ಶ್ರೀಯುತ ಸುಬ್ರಹ್ಮಣ್ಯ ರವರ ಅನುಪಸ್ಥಿತಿಯಲ್ಲಿ) ಮಾತು ಪ್ರಾರಂಭಿಸಿದ ಶ್ರೀಯುತ ಶಿವರಾಮ್ ಶೆಟ್ಟಿ ಮತ್ತು ಷಣ್ಮುಖ್ ರವರು ತಂಗುದಾಣದಲ್ಲಿ ಬದಲಾವಣೆ ಮಾಡಿರುವ ವಿಚಾರವನ್ನು ಸದಸ್ಯರೆಲ್ಲರ ಮುಂದೆ ಪ್ರಸ್ತುತ ಪಡಿಸಿದರು. ಇದರ ವಿಚಾರವಾಗಿ ಎಲ್ಲಾ ಸದಸ್ಯರು ತಮ್ಮ ಸಮ್ಮತಿ ಸೂಚಿಸಿದರು. ನಂತರ ಸಭಿಕರೆಲ್ಲರೂ ಬರುವ ಶನಿವಾರ ಅಂದರೆ ದಿನಾಂಕ 26.09.2009 ರ ಮಧ್ಯಾನ್ಹ 2 ಘಂಟೆಗೆ ಪೂಜಾ ಕಾರ್ಯಕ್ರಮ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಏಕೆಂದರೆ ನಾವುಗಳು ಪ್ರವಾಸ ಹೊರಡಲು ಸಂಜೆಯ 7.30ರ ಸಮಯ ಬಹಳ ಅನುಕೂಲಕರವಾದುದರಿಂದ ಈ ಸಮಯಕ್ಕೆ ಎಲ್ಲಾ ಸದಸ್ಯರು ಸೇರಬೇಕಾದ ಪರಿಸ್ಥಿತಿ ಇರುವುದರಿಂದ ಪೂಜಾ ಕಾರ್ಯಕ್ರಮ ಏರ್ಪಡಿಸುವುದು ಸೂಕ್ತ ಎಂಬ ಏಕಮುಖ ಅಭಿಪ್ರಾಯ ವ್ಯಕ್ತವಾಯಿತು.. ಇದರ ಜೊತೆಗೆ ಸದಸ್ಯರುಗಳು ತರಬಹುದಾದಂತಹ ತಿಂಡಿ, ತಿನಿಸುಗಳ ಬಗ್ಗೆ ಕೂಡಾ ಚರ್ಚೆ ನಡೆಯಿತು. ಎಲ್ಲರೂ ತಮ್ಮ ಅನುಕೂಲಕ್ಕನುಗುಣವಾಗಿ ತಕ್ಕ ತಿಂಡಿ ತಿನಿಸುಗಳನ್ನು ತರಲು ಸಮ್ಮತಿಸಿದರು. ಎಲ್ಲಕ್ಕೂ ಮಿಗಿಲಾಗಿ ಎಲ್ಲರ ಚಿತ್ತ ಷಣ್ಮುಖ್ ರವರ ಮೆಣಸಿನಕಾಯಿ ಬೋಂಡಾ ಮತ್ತು ಮಂಡಕ್ಕಿ ಪುರಿ ಕಡೆಗಿತ್ತು. ಎಲ್ಲರ ಒತ್ತಾಯದ ಮೇರೆಗೆ ಷಣ್ಮುಖ್ ಈ ತಿನಿಸುಗಳನ್ನು ಖುದ್ದಾಗಿ ತಯಾರು ಮಾಡಿ ತರುವುದಾಗಿ ತಿಳಿಸಿದರು. ಆನಂತರದ ಸಮಯದಲ್ಲಿ ಚರ್ಚೆಗೆ ಬಂದ ವಿಷಯವೆಂದರೆ ಹೊರಡುವ ದಿನದ ರಾತ್ರಿ ಊಟದ ಬಗ್ಗೆ, ನಾವುಗಳು ಹೊರಡುವ ಸಮಯ ಸಂಜೆ 7.30 ಆಗಿರುವುದರಿಂದ ಇದು ಅವರವರ ಮನೆಯಲ್ಲೇ ಊಟ ಮುಗಿಸಿ ಹೊರಡಲು ಪ್ರಶಸ್ಥ ಸಮಯವಲ್ಲದ ಕಾರಣ, ಆ ರಾತ್ರಿಯ ಊಟಕ್ಕೆ ತುಮಕೂರಿನ ಯಾವುದಾದರೊಂದು ಹೋಟೆಲ್ ನಿಂದ ಮಾರ್ಸಲ್ ಮಾಡಿಸಿಕೊಂಡು ಮಾರ್ಗ ಮಧ್ಯೆದಲ್ಲಿ ಊಟ ಮಾಡುವುದು ಸರಿ ಎಂದು ಶ್ರೀಯುತ ಕೇಶವ್ ರವರು ತಿಳಿಸಿದರು ಇದಕ್ಕೆ ಎಲ್ಲರೂ ಸಮ್ಮತಿಸಿದರು. ಈ ವಿಚಾರವಾಗಿ ಶ್ರೀಯುತ ರಮೇಶ್ ಮತ್ತು ಶ್ರೀಯುತ ಶಿವರಾಮ್ ಶೆಟ್ಟಿ ರವರು ಕೆಲವು ಕಡೆ (ಹೋಟೇಲ್ ಗಳಲ್ಲಿ) ಇದರ ಬಗ್ಗೆ ವಿಚಾರಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ನಿರ್ಧರಿಸಿದರು. ನಂತರ ಬರುವ ಮಂಗಳವಾರ (ದಿ.22.09.2009) ದಂದು ಮತ್ತೊಮ್ಮೆ ಪ್ರಾರ್ಥನಾ ಟ್ರಾವೆಲ್ಸ್ ಗೆ ಭೇಟಿ ನೀಡಿ ನಾವು ಬುಕ್ ಮಾಡಿರುವ ವಾಹನ (KA06 B7668)ದ ಸ್ಥಿತಿ ಗತಿಯ ಬಗ್ಗೆ ಪರಿಶೀಲಿಸೋಣ ಎಂಬ ಒಮ್ಮತದ ನಿರ್ಧಾರದೊಂದಿಗೆ ಸಭೆ ಮುಕ್ತಾಯವಾಯಿತು.

1 comment:

  1. All arrangements made for the tour is verry verry good. Wish you all happy journey and enjoy the tour.

    Best wishes from S.C.R.Gaikwad

    ReplyDelete