Saturday, September 5, 2009

ಸಮಿತಿಯ ಸಭೆ

ದಿನಾಂಕ 02.09.2009 ರಂದು ಸಭೆ ಸೇರಿದ ಸದಸ್ಯರುಗಳು ಈ ಬಾರಿ ಯಾವ ಪ್ರದೇಶದ ಕಡೆಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬುದರ ಬಗ್ಗೆ ಚರ್ಚೆನಡೆಸಿದಾಗ ಮೊದಲು ಕೇಳಿಬಂದ ಸ್ಥಳದ ಹೆಸರು "ಯಾಣ, ಶಿರಸಿ". ನಂತರ ನಮಗೆ ಲಭ್ಯವಿರುವ ಕಾಲಾವಕಾಶ ಮತ್ತು ಬೇಕಾಗಿರುವ ಕಾಲಾವಕಾಶದ ಬಗ್ಗೆ ಚರ್ಚಿಸಿದಾಗ, ನಮಗೆ ಲಭ್ಯವಿರುವ ಕಾಲಾವಕಾಶದಲ್ಲಿ ಮೇಲ್ಕಂಡ ಪ್ರದೇಶಗಳನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ನಂತರ ಕೇಳಿ ಬಂದ ಸ್ಥಳದ ಹೆಸರೇ "ಗೋವಾ"!!. ಸಮಿತಿಯು ಸರ್ವಾನುಮತದ ನಿರ್ಣಯದೊಂದಿಗೆ ಗೋವಾ ಈ ಬಾರಿಯ ನಮ್ಮ ಪ್ರವಾಸ ಸ್ಥಳ ಎಂದು ಘೋಷಿಸಿತು. ನಂತರದ ಸಮಯದಲ್ಲಿ ಸಮಿತಿಯ ಸದಸ್ಯರ ಹೊರತಾಗಿ, ಪ್ರವಾಸಕ್ಕೆ ಬರಲು ಸಿದ್ಧರಿರುವ ಇತರೆ ಸದಸ್ಯರು(ಸಮಿತಿ ಸದಸ್ಯರ ಕುಟುಂಬ ಸದಸ್ಯರು)ಗಳ ಬಗ್ಗೆ ಚರ್ಚಿಸಿದಾಗ, ಮುಂದಿನ ಸಭೆಯಲ್ಲಿ ಈ ವಿಷಯವನ್ನು ಇತ್ಯರ್ಥಗೊಳಿಸಲು ಒಮ್ಮತದ ನಿರ್ಣಯದೊಂದಿಗೆ ಸಭೆ ಮುಕ್ತಾಯಗೊಂಡಿತು.

No comments:

Post a Comment