Thursday, October 1, 2009

ಕರ್ನಾಟಕ ಪ್ರವೇಶ - ಹೊನ್ನಾವರದಲ್ಲಿ ಊಟ

ಮಡ್ಗಾವ್ ನಲ್ಲಿನ ಮುಂದುವರಿದ ನಮ್ಮ ಪ್ರಯಾಣ ಸುಮಾರು 12.30 ಘಂಟೆ ಹೊತ್ತಿಗೆ ಗೋವಾ ಗಡಿದಾಟಿತು. ಆಗ ನಮ್ಮ ಉಮಾ ಮೇಡಮ್ ರವರು Housie Housie ಆಟ ಆಡೋಣ ಎಂದು ಆಟದ ವಿಧಾನವನ್ನು ವಿವರಿಸಲು ಪ್ರಾರಂಭಿಸಿದಾಗ ರಮೇಶ್ ರವರು ಅದಕ್ಕೆ ದನಿಗೂಡಿಸಿ ಆಟದ ಬಗೆಗಿನ ಸವಿವರವನ್ನು ಒದಗಿಸಿದರು. ಆ ವೇಳೆಗಾಗಲೇ ಪಿಂಕಿ (ಸಹನಾ)ಗೆ ವಾಂತಿಯಾಗುವ ಲಕ್ಷಣಗಳು ಉಂಟಾಗುತ್ತಿದ್ದರಿಂದ "ನಾನು ಈಗ ಆಟದಲ್ಲಿ ಭಾಗವಹಿಸುವುದಿಲ್ಲ" ಎಂದು ತಿಳಿಸಿ ವಿಶ್ರಾಂತಿಯ ಮೊರೆ ಹೋದಳು. ಸರಿ ಅವಳ ಪರವಾಗಿ ನಾನು ಆಟವಾಡಿದೆ. ಮೊದಲ ಆಟದಲ್ಲಿ ರಿತಿಕಾ ಭರ್ಜರಿ ಜಯಭೇರಿ ಬಾರಿಸಿ ಸಾಕಷ್ಟು ಹಣ ಕೊಳ್ಳೆ ಹೊಡೆದಳು. ನನಗೆ ಲಭಿಸಿದ್ದು ಮಾತ್ರ ಶೂನ್ಯ. ನಂತರದ ಆಟದಲ್ಲಿ ರಿತಿಕಾ, ಮಂಜುನಾಥ ಮತ್ತು ಪಾರ್ಥಸಾರಥಿಯವರಿಗೆ ಒಂದೊಂದು ಬಹುಮಾನ ಲಭಿಸಿತು. ಆಗಲೂ ನನ್ನ ಸಂಪಾದನೆ ಮಾತ್ರ zero. ಎರಡೇ ಆಟಗಳಿಗೆ ಎಲ್ಲರಿಗೂ ಸಾಕಾಗಿತ್ತು. ಸರಿ ಎಲ್ಲರೂ ವಿಶ್ರಾಂತಿ ಬಯಸಿದರು. ಆ ವೇಳೆಗಾಗಲೇ ಮಳೆಯ ರಭಸ ಜಾಸ್ತಿಯಾಗಿತ್ತು. ಸುಮಾರು 2.30ರ ಸುಮಾರಿಗೆ ಹೊನ್ನಾವರತಲುಪಿದೆವು. ಅಲ್ಲೇ ಸಮೀಪದಲ್ಲಿದ್ದ ಹೋಟೀಲ್ ನಲ್ಲಿ ಊಟ ಮಾಡಿದೆವು.






ಆ ವೇಳೆಗಾಗಲೇ ಎಲ್ಲರೂ ಈ ಮಳೆಯ ರಭಸದಲ್ಲಿ ನಾವು ಜೋಗ್ ಜಲಪಾತದ ವೀಕ್ಷಣೆ ಮಾಡುವುದು ದುಸ್ಥರವೇ ಸರಿ ಎಂದು ನಿರ್ಧರಿಸಿಯಾಗಿತ್ತು. ಅದಕ್ಕೆ ಪರ್ಯಾಯವೆಂಬಂತೆ ಷಣ್ಮುಖ್ ಆ ಹೋಟೀಲ್ ನಲ್ಲಿ ತೂಗು ಹಾಕಿದ್ದ ಜೋಗ್ ಜಲಪಾತದ ಫೋಟೋವನ್ನೇ ಕ್ಲಿಕ್ಕಿಸಿದ.




ಊಟದ ನಂತರ ನಾವು ಜೋಗ್ ಕಡೆಗಿನ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಸ್ವಲ್ಪ ಸಮಯದ ಬಳಿಕ ಬಹುತೇಕ ಮಂದಿ ನಿದ್ದೆಗೆ ಶರಣಾಗಿದ್ದರು. ಅಷ್ಟರಲ್ಲಿ ನನ್ನ ಪಿಂಕಿಯ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಿಸತೊಡಗಿತು. ಆದರೂ ಮಾರ್ಗ ಮಧ್ಯದಲ್ಲಿ ಒಂದೆರಡು ಬಾರಿ ವಾಂತಿ ಮಾಡುವು ನೆಪದಲ್ಲಿ ವಾಹನವನ್ನು ನಿಲ್ಲಿಸಿ ವಾಂತಿ ಮಾಡುವ ಪ್ರಯತ್ನ ಮಾಡಿದಳು. ಈ ಮಧ್ಯ ನಮ್ಮ ವಾಹನದಲ್ಲಿನ ಟಿ.ವಿ. ಯಲ್ಲಿ "Taare Zameen Par" (तारॆ झमीन पर) ಚಿತ್ರ ಪ್ರಸಾರವಾಗುತ್ತಿತ್ತು, ಎಲ್ಲರೂ ಆ ಚಿತ್ರದ ವೀಕ್ಷಣೆಯಲ್ಲಿ ಮಗ್ನರಾಗಿದ್ದರು.

No comments:

Post a Comment