Wednesday, September 30, 2009

ಮಡ್ಗಾವ್ ನಲ್ಲಿ ತಿಂಡಿ ಮತ್ತು ಬಾಯಲ್ಲಿ ನೀರೂರಿಸಿದ ರಸ್ತೆ ಬದಿಯ ಬಾಂಗ್ಡಾ ಮೀನು.

ಕಲಂಗೂಟ್ ನಿಂದ 7.15ಕ್ಕೆ ಹೊರಟ ನಾವುಗಳು ಸುಮಾರು 9.30ರ ಸುಮಾರಿಗೆ ಮಡ್ಗಾವ್ ಗೆ ತಲುಪಿದಾಗ, ಅಲ್ಲಿನ ಮುನ್ಸಿಪಾಲಿಟಿ ಬಳಿ ಇರುವ ಕಾಮತ್ ಹೋಟೇಲ್ ನಲ್ಲಿ ತಿಂಡಿ ತಿಂದು ನಂತರ ಪ್ರಯಾಣ ಮುಂದುವರೆಸುವ ಬಗ್ಗೆ ನಿರ್ಧರಿಸಿದೆವು. ಕಲಂಗೂಟ್ ನಿಂದ ಮಡ್ಗಾವ್ ಮಾರ್ಗಮಧ್ಯದಲ್ಲಿ ರಿತಿಕಾ ಮತ್ತು ಪ್ರೀತಿ ಕ್ಲಿಕ್ಕಿಸಿದ ಕೆಲವು ಸುಂದರ ಫೋಟೋಗಳು ಇಲ್ಲಿವೆ.















ಕಾಮತ್ ಹೋಟೇಲ್ ನಲ್ಲಿ ತಿಂಡಿ ತಿಂದು ಹೊರಡುವ ಹೊತ್ತಿಗೆ ಸಮಯ ಸುಮಾರು 10.30 ಆಗಿತ್ತು. ಆ ಹೋಟೀಲ್ ನಿಂದ ನಮ್ಮ ವಾಹನದ ಬಳಿಗೆ ಬರುವಾಗ ಫುಟ್ ಪಾತ್ ನಲ್ಲಿ ಮಾರಾಟವಾಗುತ್ತಿದ್ದ ಬಾಂಗ್ಡಾ ಮೀನು ನಮ್ಮ ದೇವಯಾನಿ ಮತ್ತು ಉಮಾ ಶೆಟ್ಟಿ ಮೇಡಮ್ ರವರ ಕಣ್ಣಿಗೆ ಬಿದ್ದಿತು, ರೇಟು ವಿಚಾರಿಸಿದಾಗ ಬೆಲೆ ತುಂಬಾ ಕಡಿಮೆ ಎನಿಸಿ ಶ್ರೀಮತಿ. ದೇವಯಾನಿ ಮೇಡಮ್ ರವರು ನಮಗೆ "ನಿಮಗೆಷ್ಟು ಬೇಕೋ ತೆಗೆದುಕೊಂಡು ನಮಗೆ ಒಂದು ಸ್ಟೌವ್, ಮತ್ತು ಕೆಲವು ಪದಾರ್ಥಗಳನ್ನು ಹೊಂದಿಸಿಕೊಟ್ಟರೆ ನಾವು ನಿಮಗೆ ಒಳ್ಳೆಯ ಬಾಂಗ್ಡಾ ಪ್ರೈ ಮಾಡಿಕೊಡುತ್ತೇವೆ" ಎಂದು ನಮ್ಮಬಾಯಲ್ಲಿ ನೀರೂರಿಸಿದರು. 11 ರ ಸುಮಾರಿಗೆ ನಾವು ಮಡ್ಗಾವ್ ನಿಂದ ಹೊರಟೆವು. ಅಲ್ಲಿಂದ ಹೊರಟ ಕೆಲವೇ ದೂರದಿಂದ ಮೋಡ ಕವಿದ ವಾತಾವರಣ ಶುರುವಾಯಿತು.






ಇದೇ ವಾತಾವರಣದಲ್ಲಿ ನಾವು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.

No comments:

Post a Comment