ಲೀಲಾ ಬೀಚ್ ನಲ್ಲಿ ಚೆನ್ನಾಗಿ ಆಟವಾಡಬಹುದೆಂದು ಕೊಂಡಿದ್ದ ನಮಗೆಲ್ಲರಿಗೂ ನಿರಾಸೆ ಕಾದಿತ್ತು. ಲೀಲಾ ಪ್ಯಾಲೇಸ್ ಬಳಿ ವಾಹನ ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸಮುದ್ರ ತಲುಪಿದೆವು. ಅಲ್ಲಿ ನೋಡಿದರೆ ಒಂದು ನರಪಿಳ್ಳೆ ಕೂಡಾ ಇಲ್ಲ! ಅಲ್ಲೆಲ್ಲೋ ದೂರದಲ್ಲಿ ಒಂದಿಬ್ಬರು ಉಸುಕಿನ ಮೇಲೆ ಕ್ರಿಕೆಟ್ ಆಡುತ್ತಿದ್ದರು. ಸರಿ ನಮ್ಮಲ್ಲಿ ಕೆಲವರು ನೋಡೋಣ, ನೀರಿಗೆ ಇಳಿದೇ ಬಿಡೋಣ ಎಂದು ಹತ್ತಿರಕ್ಕೆ ಹೋಗಿ ನೋಡಿದಾಗ ಗೊತ್ತಾಯಿತು ಇಲ್ಲಿ ಆಳ ಸ್ವಲ್ಪ ಜಾಸ್ತಿ ಇದೆ ಎಂದು. ಆದ್ದರಿಂದ ಯಾರೂ ನೀರಿಗೆ ಇಳಿಯುವ ಗೋಜಿಗೆ ಹೋಗದೇ, ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಹಿಂತಿರುಗಲು ತೊಡಗಿದೆವು. ಅಲ್ಲಿದ್ದ ಕೆಲವು ನಿಮಿಷಗಳ ಕಾಲದ ಚಿತ್ರಣಗಳು ತಮಗಾಗಿ:
ಮುಂದಿನ ಕಾರ್ಯಕ್ರಮದ ಬಗ್ಗೆ ಚರ್ಚೆ. ಶ್ರೀಮತಿ. ಉಮಾ ಶೆಟ್ಟಿ, ಶ್ರೀಮತಿ. ದೇವಯಾನಿ, ರಮೇಶ್ ಮತ್ತು ಶಿವರಾಮ್ ಶೆಟ್ಟಿಯವರ ನಡುವೆ.
ಸಮುದ್ರದ ಸುಂದರ ದೃಶ್ಯಗಳನ್ನು ದಕೇಕಚಿತ್ತಳಾಗಿ ನೋಡುತ್ತಿರುವ ಸಹನಾ
ಮುರಳೀಧರ್ ಮತ್ತು ಪಾರ್ಥಸಾರಥಿ
ಪ್ರೀತಿ.
ಶ್ರೀಮತಿ. ಉಮಾ ಶೆಟ್ಟಿ.
ರಿತಿಕಾ ಮತ್ತು ಪ್ರೀತಿ
ಶ್ರೀಮತಿ ದೇವಯಾನಿ ಮತ್ತು ಶ್ರೀ. ಕೇಶವ್
ಲೀಲಾ ಸಮುದ್ರ ದಡದಲ್ಲಿ ಪ್ರೀತಿ, ರಿತಿಕಾ, ಶ್ರೀಮತಿ. ಉಮಾ ಶೆಟ್ಟಿ, ಶ್ರೀಮತಿ. ದೇವಯಾನಿ ಮತ್ತು ಸಹನಾ (ಎಡದಿಂದ ಬಲಕ್ಕೆ)
ಲೀಲಾ ಬೀಚ್ ನಿಂದ ಹಿಂತುರುಗುವಾಗ ಲೀಲಾ ಪ್ಯಾಲೇಸ್ ನ ಕಾಂಪೌಡ್ ಬಳಿ ಸಹನಾ
No comments:
Post a Comment