Wednesday, September 30, 2009

ಡೌನ್ ಪಾಲ್ ಬೀಚ್ ನಲ್ಲಿ ಮೋಜು ಮಸ್ತಿ

ಲೀಲಾ ಬೀಚ್ ನಿಂದ ಹೊರಟ ನಾವುಗಳು ಡೌನ್ ಪಾಲ್ ಬೀಚ್ ಗೆ ಹೋಗಲು ತೀರ್ಮಾನಿಸಿದೆವು. ಸರಿ ಎಲ್ಲರೂ ವಾಹನವನ್ನೇರಿದೆವು. ಡೌನ್ ಪಾಲ್ ಬೀಚ್ ತಲುಪಲು ಇನ್ನೂ ಸಾಕಷ್ಟು ಸಮಯ ಬೇಕು ಎಂದು ನಮ್ಮ ಡ್ರೈವರ್ ಪಾಂಡು ತಿಳಿಸಿದರು. ಸರಿ, ಎಲ್ಲರೂ ನಿದ್ದೆಗೆ ಮೊರೆ ಹೋದರು. ಡೌನ್ ಪಾಲ್ ಬೀಚ್ ನ ಮಾರ್ಗ ಮಧ್ಯದಲ್ಲಿ ನಿದ್ದೆಯಿಂದ ಎಚ್ಚೆತ್ತ ನನಗೆ ಒಂದು ಆಘಾತ ಕಾದಿತ್ತು. ನನ್ನ ಕ್ಯಾಮರಾ ಪೌಚ್ ನಲ್ಲಿ ಕ್ಯಾಮರಾ ಇರಲಿಲ್ಲ. ಸಹನಾಳನ್ನು ನೀನು ತೆಗೆದುಕೊಂಡಿದ್ದೀಯಾ ಎಂದು ವಿಚಾರಿಸಿದೆ, ಅದಕ್ಕೆ ಅವಳು ಇಲ್ಲಾ ಎಂದಳು. ನಮ್ಮ ಸಹೋದ್ಯೋಗಿ ಸ್ನೇಹಿತರೆಲ್ಲರೂ "ನೀವೆಲ್ಲೋ ಕ್ಯಾಮರಾವನ್ನು ಲೀಲಾ ಬೀಚ್ ನಲ್ಲೆಲ್ಲಾದರೂ ಬಿಟ್ಟು ಬಂದಿರಬೇಕು" ಎಂದರು. ಇದನ್ನು ನಾನು ಖಡಾ ಖಂಡಿತವಾಗಿ ನಿರಾಕರಿಸಿದೆ. ಅದಕ್ಕೆ ಪುರಾವೆ ಏನೆಂದರೆ ನಾನು ಲೀಲಾ ಬೀಚ್ ನಿಂದ ಹೋರಟು ವಾಹನವನ್ನೇರುವ ಮೊದಲು ಅಲ್ಲೇ ವಾಹನದ ಬಳಿ ಸಹನಾಳ ಒಂದು ಫೋಟೋ ಸಹಾ ಕ್ಲಿಕ್ಕಿಸಿದ್ದೆ. ಆದರೆ ನಾನು ಸಹನಾಳ ಬಳಿ ಹೇಳಿದ್ದೆ, "ನಾವಿಬ್ಬರೂ ಮಲಗಿದ್ದಾಗ ನಮ್ಮ ಸ್ನೇಹಿತರು ಯಾರೋ, ಕ್ಯಾಮರಾ ತೆಗೆದುಕೊಂಡಿದ್ದಾರೆ" ಎಂದು. ಸರಿ ಬಹಳಷ್ಟು ಜನ, " ನಾವುಗಳು ಈಗ ವಾಪಸ್ ಲೀಲಾ ಬೀಚ್ ಗೆ ಹೋಗಿ ಕ್ಯಾಮರಾ ಹುಡುಕಿ ತರೋಣ " ಎಂದು ಬಹಳಷ್ಟು ಆಟವಾಡಿಸಿದರು. ಕಡೆಗೆ ದೇವಯಾನಿ ಮೇಡಮ್ ರವರು ಕ್ಯಾಮರಾವನ್ನು ಕೊಟ್ಟು "ಇದನ್ನು ನೀವು ಬೀಚ್ ಹತ್ತಿರ ಬಿಟ್ಟು ಬಂದಿದ್ದಿರಿ" ಎಂದರು. ಇದನ್ನು ನಿರಾಕರಿಸಿದಾಗ ನಿಜಾಂಶ (ನಾನು ಸಹನಾ ಸಂಪೂರ್ಣ ನಿದ್ರಾವಸ್ಥೆಯಲ್ಲಿದ್ದಾಗ ತೆಗೆದುಕೊಂಡಿದ್ದು) ವನ್ನು ತಿಳಿಸಿದರು. ಅಷ್ಟು ಹೊತ್ತಿಗೆ ನಾವು ಡೌನ್ ಪಾಲ್ ಬೀಚ್ ಗೆ ತಲುಪಿದೆವು. ಇಲ್ಲಿ ಮೋಟಾರ್ ಬೋಟಿಂಗ್ ಆಡುವ ವ್ಯವಸ್ಥೆ ಇತ್ತು. ತಕ್ಷಣ ಮುರಳಿ ಟಿಕೆಟ್ ತೆಗೆದುಕೊಂಡು ಮೋಟಾರ್ ಬೋಟಿಂಗ್ ಗೆ ಹೋಗಲು ಟಿಕೆಟ್ ಕೌಂಟರ್ ಬಳಿ ಹೋಗಿ ವಿಚಾರಿಸಿ ಟಿಕೆಟ್ ನ ಮೌಲ್ಯ 200 ರೂ ಎಂದು ತಿಳಿದಾಗ ನಿರಾಶರಾಗಿ ಹಿಂತಿರುಗಿದರು. ಷಣ್ಮುಖ್, ಶ್ರೀಮತಿ.ದಯಾಮಣಿ ಮತ್ತು ರಾಹುಲ್ ಬೋಟಿಂಗ್ ಮಾಡಿ ಹಿಂತಿರುಗಿದರು.















ನಂತರ ನಾನು, ಮಂಜುನಾಥ್ ಮತ್ತು ಸುಬ್ರಹ್ಮಣ್ಯ ಬೀಚ್ ನ ಮತ್ತೊಂದು ಬದಿಗೆ ಹೋಗಿ ಅಲ್ಲಿನ ವಿವಿಧ ಸುಂದರ ದೃಶ್ಯಗಳನ್ನು ನೋಡಿ ಮೋಟಾರ್ ಬೋಟಿಂಗ್ ಜಾಗಕ್ಕೆ ಹಿಂತಿರುಗಿದಾಗ ಅಲ್ಲಿ ನಮ್ಮವರು ಯಾರೂ ಇರಲಿಲ್ಲ. ಸುತ್ತಾ ಮುತ್ತಾ ನೋಡಿದಾಗ, ಶಿವರಾಮ ಶೆಟ್ಟಿ, ಪಾರ್ಥಸಾರಥಿ, ಮುರಳಿಧರ್, ರಮೇಶ್ ಅಲ್ಲೇ ಹತ್ತಿರವಿದ್ದ ಕಾಫೀ ಡೇ ನಲ್ಲಿ ಕಾಫೀ ಕುಡಿಯುತ್ತಿರುವುದು ಕಂಡುಬಂತು. ಆಗ ನಾವುಗಳೂ ಸಹ ಅವರನ್ನು ಸೇರಿಕೊಂಡು ಕಾಫೀ ಕುಡಿದೆವು. ಆಗ ಶಿವರಾಮ ಶೆಟ್ಟಿ ರವರು, " ಬೇಗ ಕಾಫೀ ಕುಡಿದು ವಾಹನದ ಬಳಿ ತೆರಳಿ, ಉಳಿದವರನ್ನು ಕರೆದುಕೊಂಡು ಬರುತ್ತೇವೆ " ಎಂದರು. ಸರಿ ಅವರ ಆದೇಶದ ಮೇರೆಗೆ, ನಾನು, ಪಾರ್ಥಸಾರಥಿ, ಮುರಳಿಧರ್ ಮಂಜುನಾಥ್ ಮತ್ತು ಸುಬ್ರಹ್ಮಣ್ಯ ರವರು ವಾಹನದ ಬಳಿ ತೆರಳಿ ಉಳಿದವರಿಗಾಗಿ ಸಾಕಷ್ಟು ಹೊತು ಕಾದರೂ ಬಾರದಿದ್ದಾಗ ನಾವೆಲ್ಲರೂ ಮತ್ತೆ ಬೋಟಿಂಗ್ ಸ್ಥಳಕ್ಕೆ ತೆರಳಿದಾಗ, ಸಹನಾ ಮತ್ತು  ಶ್ರೀಮತಿ. ದೇವಯಾನಿ ರವರು ಬೋಟಿಂಗ್ ಮಾಡುತ್ತಿದ್ದರು. ಪ್ರೀತಿ ಮತ್ತು ರಿತಿಕಾ ಬೋಟಿಂಗ್ ಮಾಡಿ ಹಿಂತಿರುಗಿದ್ದರು.






























ಇಷ್ಟೆಲ್ಲಾ ಕಾರ್ಯಕ್ರಮ ಮೋಜು ಮಜಲುಗಳನೆಲ್ಲಾ ಮುಗಿಸಿಕೊಂಡು, ನಾವೆಲ್ಲರೂ ಮತ್ತೆ ಕಲಂಗೂಟ್ ಬೀಚ್ ಗೆ ತೆರಳಿ ಸಮುದ್ರ ಮತ್ತಷ್ಟು ಹೊತ್ತು ಮೋಜು ಮಾಡುವುದೆಂದು ನಿರ್ಧರಿಸಿ ಹೊರಡುವ ಹೊತ್ತಿಗಾಗಲೇ ಸಮಯ 5 ಘಂಟೆಯಾಗಿತ್ತು.



No comments:

Post a Comment