Friday, September 11, 2009
ತಂಗುದಾಣದ ಬದಲಾವಣೆ ಸಂಬಂಧ ಸಭೆ
ನೆನ್ನೆ ತಿಳಿಸಿದಂತೆ ಷಣ್ಮುಖ್ ರವರು ಕೆಲವು ಆಯ್ದ ಸದಸ್ಯರೊಡನೆ ತಂಗುದಾಣದ ಬದಲಾವಣೆಯ ಬಗ್ಗೆ ಚರ್ಚಿಸಿ, ವೆಸ್ಟ್ರನ್ ಹೋರಿಝೋನ್ ಗೆಸ್ಟ್ ಹೌಸ್ (ಹೊಸ ತಂಗುದಾಣ) ನ ಮಾಲೀಕರೊಡನೆ ಸಂಪರ್ಕಿಸಿ ನಾವು ಗೋವಾ ತಲುಪುವ ದಿನದಂದು ಅಲ್ಲಿ ರೂಮುಗಳು ದೊರಕುವುದರ ಬಗ್ಗೆ ಮತ್ತು ಅಲ್ಲಿನ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು. ಗೆಸ್ಟ್ ಹೌಸ್ ನ ಮಾಲೀಕರಾದ ಆಂಟೊನಿ ರವರ ಜೊತೆ ಸಂಜೆ ಐದು ಗಂಟೆಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಆಂಟೋನಿರವರು "ಆ ದಿನದಂದು ಅಲ್ಲಿ ರೂಮುಗಳು ದೊರಕುತ್ತವೆ ಮತ್ತು ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇವೆ, ಅಲ್ಲಿಂದ ಐದು ಕಿ.ಮೀ ಗಳಷ್ಟು ದೂರದಲ್ಲಿ ಪಕ್ಕಾ ಕರ್ನಾಟಕದ ಊಟ, ಉಪಹಾರ ದೊರಕುವ ಹೋಟೆಲ್ ಇದೆ ಮತ್ತು ಶಾಖಾಹಾರಿ ಉಪಹಾರ ದೊರಕುವ ಉಪಹಾರ ಮಂದಿರ ಗೆಸ್ಟ್ ಹೌಸ್ ನ ಸಮೀಪದಲ್ಲೇ ಇದೆ ಅಲ್ಲದೇ ನಿಮಗಾಗಿ 2ದೊಡ್ಡ ರೂಮುಗಳನ್ನು ಮತ್ತು 3 ಚಿಕ್ಕ ರೂಮುಗಳನ್ನು ಕಾಯ್ದಿರಿಸಿರುತ್ತೇವೆ" ಎಂದು ತಿಳಿಸಿದರು. ಈ ಸಂಬಂಧ ಎಲ್ಲಾ ಸದಸ್ಯರೊಡನೆ ಚರ್ಚಿಸಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುವ ಸಲುವಾಗಿ ಇಂದು ಸಂಜೆ ಐದು ಗಂಟೆಗೆ ಸಭೆ ನಡೆಸುವ ನಿರ್ಧಾರಮಾಡಿ ಎಲ್ಲಾ ಸದಸ್ಯರಿಗೂ ತಪ್ಪದೇ ಸಭೆ ಹಾಜರಾಗುವಂತೆ ಮನವಿ ಮಾಡಿದರು.
Labels:
೧೧.೦೯.೦೯ ರಂದು ಸಭೆ
Subscribe to:
Post Comments (Atom)
ಈ ಸ್ಥಳ ಕನ್ಫರ್ಮ್ ಆಯ್ತ ಅಥವಾ ಇನ್ನೂ ಏನಾದರೂ ಬದಲಾವಣೆಗಳು ಇವೆಯಾ???
ReplyDeleteನಮಸ್ಕಾರ ಸಹನಾವರಿಗೆ, ಮಹೇಶ್ ಸರ್ ಬರೆದಿರುವ ಬ್ಲೋಗ್ ಓದಿದೆ. ತುಂಬಾ ಚೆನ್ನಾಗಿತ್ತು. ನಾನು ನಿಮ್ಮ ಜೊತೆ ಪ್ರವಾಸ ಮಾಡ್ತಾ ಇದ್ದೀನೇನೋ ಅನ್ನಿಸಿಬಿಟ್ಟಿತ್ತು.. ಎಲ್ಲಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಓದುಗರ ಪರವಾಗಿ ಎಲ್ಲರಿಗೂ ಧನ್ಯವಾದಗಳು..
Delete