Monday, September 28, 2009

ಗೋವಾ ಗಡಿ ಪ್ರವೇಶ


8 ಘಂಟೆಗೆ ಅಂಕೋಲ ದಲ್ಲಿ ತಿಂಡಿ ತಿಂದು ಹೊರಟ ನಾವುಗಳು ಕಾರವಾರದ ಮೂಲಕ ಹೋಗುವಾಗ, ಕಾರವಾರ ಬಂದರಿನ ರಸ್ತೆ ಬದಿಯ ವೀಕ್ಷಣೆ ಕೂಡ ಮಾಡಿದೆವು. ಆಲ್ಲಿನ ಹಡುಗಳನ್ನು ನೋಡಿ ಕೆಲವು ಫೋಟೋ ಕ್ಲಿಕ್ಕಿಸಿದೆವು.

ಕಾರವಾರದ ಬಂದರಿನ ಬಳಿ ಸಹನಾ

ಬಂದರಿನ ಬಳಿ (ಎಡದಿಂದ): ಸಹನಾ, ದಯಾಮಣಿ, ರಿತಿಕಾ ಮತ್ತು ಪ್ರೀತಿ.

ಅಲ್ಲಿಂದ ಹೊರಟ ನಾವುಗಳು ಸುಮಾರು 10.30ರ ಹೊತ್ತಿಗೆ ಗೋವಾ ಗಡಿರೇಖೆ ಪ್ವ್ರವೇಶಿಸಿ ಅಲ್ಲಿನ ಎಲ್ಲಾ ರೀತಿಯ ಕ್ರಿಯೆಗಳನ್ನು ಪೂರ್ಣಗೊಳಿಸಿದೆವು. ಅಲ್ಲಿಂದ ಸುಮಾರು 2 ಕಿ.ಮೀ ದೂರ ಕ್ರಮಿಸುವ ಹೊತ್ತಿಗಾಗಲೇ ಅಂಕೋಲದಲ್ಲಿ  ತಿಂಡಿ ತಿನ್ನದಿದ್ದ ಸ್ನೇಹಿತರ ಹೊಟ್ಟೆ ತಳಮಳಗೊಳ್ಳತೊಡಗಿತು. ಸರಿ, ಅಲ್ಲೇ ಸ್ವಲ್ಪ ದೂರದಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ನಿನ್ನೆ ರಾತ್ರಿಯ ಊಟದಲ್ಲಿ ಉಳಿದಿದ್ದ ಪಲಾವ್ ಮತ್ತು ಮೊಸರನ್ನವನ್ನು ತಿನ್ನಲು ತೀರ್ಮಾನಿಸಿದರು. ಆದರೆ ಆ ವೇಳೆಗಾಗಲೇ ಪಲಾವ್ ನ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಆದರೆ ಮೊಸರನ್ನಕ್ಕೆ ಇನ್ನೂ ಜೀವವಿತ್ತು. ಸರಿ ಕೆಲವರು ಅದನ್ನೇ ತಿನ್ನತೊಡಗಿದರು. ಅದೇ ವೇಳೆಗೆ ಅಲ್ಲೇ ಸಮೀಪದಲ್ಲಿದ್ದ ಡಾಬಾದ ಮಾಲೀಕರನ್ನು ಸಂಪರ್ಕಿಸಿದ ರಮೇಶ್ ರವರು ಲಭ್ಯವಿದ್ದ ಬ್ರೆಡ್ ಆಮ್ಲೆಟ್ ತರಿಸಿದರು. ಅದರ ಜೊತೆ ರಾತ್ರಿಯಲ್ಲಿ ಉಳಿದಿದ್ದ ಚಂಪಾಕಲಿ ಕೂಡ ನಮ್ಮ ಹೊಟ್ಟೆಗೆ ಸಹಾಯ ಮಾಡಿತು. ಅಲ್ಲಿಂದ ಗೋವಾದ ಕಡೆಗಿನ ಪ್ರವಾಸ ಮುಂದುವರೆಯಿತು.

No comments:

Post a Comment