Tuesday, September 29, 2009

ಕಲಂಗೂಟ್ ಸಮುದ್ರದಲ್ಲಿ

ಅಲ್ಲಿಂದ ಹೊರಟ ನಾವುಗಳು, ಸರಿ ಸುಮಾರು 12.30 ಕ್ಕೆ ಕಲಂಗುಟ್ ಬೀಚ್ ಸಮೀಪದ ವೆಹಿಕಲ್ ಪಾರ್ಕಿಂಗ್ ಜಾಗಕ್ಕೆ ಆಗಮಿಸಿದೆವು. ಇಷ್ಟೆಲ್ಲದರ ನಡುವೆ ರಮೇಶ್ ರವರು ಹಲವು ಬಾರಿ New Horizon ಗೆಸ್ಟ್ ಹೌಸ್ ನ ಮಾಲೀಕರಾದ ಆಂಟೋನಿ ಅವರನ್ನು ಸಂಪರ್ಕಿಸಿ, ಗೆಸ್ಟ್ ಹೌಸ್ ಗೆ ಬರುವ ಹಾದಿಯ ಬಗ್ಗೆ ವಿಚಾರಿಸಿದ್ದರು. ಪಾರ್ಕಿಂಗ್ ಸ್ಥಳಕ್ಕೆ ಬಂದ ಕೂಡಲೇ ರಮೇಶ್ ರವರು ಮತ್ತೊಂಮ್ಮೆ ಆಂಟೋನಿಯವರನ್ನು  ಸಂಪರ್ಕಿಸಿ ಗೆಸ್ಟ್ ಹೌಸ್ ಅನ್ನು ಹುಡುಕಿಕೊಂಡು ಹೊರಟರು ಅವರಿಗೆ ಮಾರ್ಗ ಮಧ್ಯೆ ಆಂಟೋನಿಯವರ ಭೇಟಿಯಾಯಿತು. ರಮೇಶ್ ರವರು ಆಂಟೋನಿಯವರೊಡಗೂಡಿ ಪಾರ್ಕಿಂಗ್ ಸ್ಥಳಕ್ಕೆ ಬಂದರು. ವಾಹನವನ್ನು ನೋಡಿದ ಆಂಟೋನಿಯವರು ಈ ವಾಹನದಲ್ಲಿ ಗೆಸ್ಟ್ ಹೌಸ್ ನ ತನಕ ಬರಲು ಸಾಧ್ಯವಿಲ್ಲ ಆದ್ಧರಿಂದ ವಾಹವನ್ನು ಇಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಗೆಸ್ಟ್ ಹೌಸ್ ಗೆ ತೆರಳುವುದು ಸೂಕ್ತ ಎಂದ ಕಾರಣ, ಎಲ್ಲರೂ ಆವರವರ ಲಗೇಜ್ ಗಳನ್ನು ಎತ್ತುಕೊಂಡು ಗೆಸ್ಟ್ ಹೌಸ್ ತಲುಪಿದೆವು. ಆ ಹೊತ್ತಿಗಾಗಲೇ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು ಮತ್ತು ಎಲ್ಲರೂ ತುಂಬಾ ದಣಿದಿದ್ದರು. ಸರಿ, ಎಲ್ಲರೂ ಲಗೇಜ್ ಗಳನ್ನು ಕೊಠಡಿಯಲ್ಲಿಟ್ಟು ಕೈ-ಕಾಲು ಮುಖ ತೊಳೆದುಕೊಂಡು ಊಟಕ್ಕೆ ರೆಡಿಯಾದೆವು. ಎಲ್ಲರೂ ಸಮೀಪದಲ್ಲಿದ್ದ ಸಸ್ಯಾಹಾರಿ ಹೋಟೇಲ್ ಒಂದಕ್ಕೆ ಹೋಗಿ ಊಟ ಮಾಡಿ ಮತ್ತೆ ರೂಮ್ ಗೆ ತೆರಳಿದೆವು. ನಮ್ಮ ಮುಂದಿನ ಗುರಿ ಸಮುದ್ರದ ನೀರಿನಲ್ಲಿ ಆಟವಾಡುವುದಾಗಿತ್ತು. ಸರಿ ಎಲ್ಲರೂ ತಡ ಮಾಡದೇ ಗೆಸ್ಟ್ ಹೌಸ್ ನಿಂದ ಕಾಲ್ನಡಿಗೆಯ ದೂರದಲ್ಲಿದ್ದ ಕಲಂಗೂಟ್ ಸಮುದ್ರತೀರಕ್ಕೆ ಬಂದೆವು. ಆ ವೇಳೆಗಾಗಲೇ ಸಮಯ 2 ಘಂಟೆಯಾಗಿತ್ತು. ಸರಿ ಮತ್ತೇನು ಕೆಲಸ, ಎಲ್ಲರೂ ನೀರಿಗೆ ಬಿದ್ದಿದ್ದೇ, ಆ ಸಮುದ್ರದ ಅಲೆಗಳ ಎದುರು ಆಟವಾಡುವುದೇ ಕೆಲಸ. ಆದರೆ, ಶ್ರೀಮತಿ ಉಮಾ ಶೆಟ್ಟಿ ಮತ್ತು ಪಾರ್ಥಸಾರಥಿಯವರು ಮಾತ್ರ ನೀರಿಗೆ ಇಳಿಯಲಿಲ್ಲ. ಸಮುದ್ರ ತೀರದಲ್ಲಿನ ಫೋಟೋಗಳು ಕೆಳಗಿವೆ:


ಸಹನಾ



ಸಮುದ್ರ ತೀರದಲ್ಲಿ (ಎಡದಿಂದ): ರಿತಿಕಾ, ಸಹನಾ ಮತ್ತು ಪ್ರೀತಿ.




ರಂಗನಾಥ್ ಪ್ರಸಾದ್ ಮತ್ತು ಮಂಜುಜಾಥ್.





ಮುರಳೀಧರ್.ಪಿ





ನಮ್ಮ ತಂಡ (ಎಡದಿಂದ): ಶಿವರಾಮ್ ಶೆಟ್ಟಿ, ಪಾರ್ಥಸಾರಥಿ, ರಮೇಶ್, ಮಂಜುನಾಥ್, ಕೇಶವ್, ಮುರಳೀಧರ್ ಮತ್ತು ಸುಬ್ರಹ್ಮಣ್ಯ.





ಮರಳುಗೂಡಿನ ಆಟ ಆಡುತ್ತಿರುವವರು (ಎಡದಿಂದ): ರಿತಿಕಾ, ಉಮಾ ಶೆಟ್ಟಿ ಮತ್ತು ಪ್ರೀತಿ.





ರಿತಿಕಾ ಮತ್ತು ಪ್ರೀತಿ.





ಮಹೇಶ್ ಮತ್ತು ಸಹನಾ ಸಮುದ್ರ ದಡದಲ್ಲಿ





ಸಮುದ್ರದ ಅಲೆಗಳ ನಡುವೆ (ಎಡದಿಂದ): ದಯಾಮಣಿ, ಸಹನಾ, ಪ್ರೀತಿ ಮತ್ತು ಷಣ್ಮುಖ್.


No comments:

Post a Comment