ಅಬ್ಬಾ, ಸಮುದ್ರದಲ್ಲಿ ಆಡಿದ್ದು ಆಯ್ತು, ಇನ್ನೂ ಆಡುವ ಆಸೆ ಎಲ್ಲರಿಗೂ ಇತ್ತೂ ಅಷ್ಟು ಹೊತ್ತಿಗೆ ಸರಿಯಾಗಿ Beach Patrolling ನವರು ಸಮುದ್ರಕ್ಕೆ ಇಳಿಯುವವರನ್ನು ತಡೆದರು. ಅಲ್ಲ್ದದೇ ನಮಗೆ ಇನ್ನೂ ಬೇರೆಡೆಗೆ ಹೋಗುವ ಕಾರ್ಯಕ್ರಮ ಕೂಡಾ ಇತ್ತು. ಬೇರೆಡೆಗೆ ಹೋಗುವ ಮೊದಲು ಎಲ್ಲರೂ ಸ್ನಾನ ಮಾಡಿ ರೆಡಿಯಾಗಬೇಕಿತ್ತು. ಯಾಕೆಂದರೆ ಆ ದಿನ ಬೆಳಿಗ್ಗೆ ಯಾರೂ ಸ್ನಾನ ಮಾಡಿರಲಿಲ್ಲ ಅಲ್ಲದೇ ಮೈಗೆ ಅಂಟಿಕೊಂಡಿದ್ದ ಸಮುದ್ರದ ಉಪ್ಪನ್ನೂ ಕೂಡ ತೊಳೆದುಕೊಳ್ಳಬೇಕಿತ್ತು. ಸರಿ ಅಷ್ಟುಹೊತ್ತಿಗಾಗಲೇ ಸಮಯ 4.30 ಆಗಿತ್ತು. ಸರಿ ಎಲ್ಲರೂ ಅಲ್ಲಿಂದ ಹೊರಟು ರೂಮ್ ಗೆ ಬಂದೆವು. ಒಬ್ಬರಿಂದೊಬ್ಬರು ಸ್ನಾನ ಮಾಡಿ ರೆಡಿಯಾಗುವ ಹೊತ್ತಿಗೆ ಸಮಯ 5.15 ಆಗಿತ್ತು, ನಮ್ಮ ಮುಂದಿನ ಗುರಿ ಅಂಜನಾ ಬೀಚ್ ಗೆ ಹೋಗಿ ಸೂರ್ಯಾಸ್ತ ನೋಡುವುದಾಗಿತ್ತು. ಸರಿ ಎಲ್ಲರೂ ಲಗುಬಗೆಯಿಂದ ವಾಹನದಲ್ಲಿ ಕುಳಿತರು. ಮಾರ್ಗಮಧ್ಯದ ಒಂದು ಉಡುಪಿ ಹೋಟೇಲ್ ನಲ್ಲಿ ಕಾಫಿ ಕುಡಿದು 5.35ರ ಸುಮಾರಿಗೆ ಅಂಜನಾ ಬೀಜ್ ತಲುಪಿದೆವು. ಎಲ್ಲರೂ ಫೋಟೋ ಕ್ಲಿಕ್ಕಿಸುವಲ್ಲಿ ಮಗ್ನ. ಅವುಗಳಲ್ಲಿನ ಕೆಲವು ದೃಶ್ಯಗಳು ತಮ್ಮೆಲ್ಲರಿಗಾಗಿ.
ಅಂಜನಾ ಸಮುದ್ರದ ಮಾರ್ಗಮಧ್ಯದ ಉಡುಪಿ ಹೋಟೇಲ್ ನಲ್ಲಿ ಮುರಳಿ, ಪ್ರಸಾದ್ ಮತ್ತು ಮಂಜುನಾಥ್
ಅಂಜನಾ ಸಮುದ್ರ ದಡದಲ್ಲಿ ರಂಗನಾಥ್ ಪ್ರಸಾದ್
ಸಮುದ್ರ ತಟದಲ್ಲಿ ಕುಮಾರನೊಡನೆ ಷಣ್ಮುಖ್ ಮತ್ತು ದಯಾಮಣಿ
ಸಹನಾ, ದಯಾಮಣಿ, ಪ್ರೀತಿ, ಚಿ.ರಾಹುಲ್ ಮತ್ತು ರಿತಿಕಾ (ಎಡದಿಂದ)
ಸರಿ ಇಷ್ಟೆಲ್ಲಾ ಮುಗಿಸಿ, ಎಲ್ಲರೂ ಸಮುದ್ರ ದಡದಿಂದ ಮೇಲೆ ಬಂದು ಅಲ್ಲಿ ದೊರಕುತ್ತಿದ್ದ ಪಾನೀಯ ಮತ್ತು ಕುರುಕುಲು ಗಳನ್ನು ತಿಂದು ಅಲ್ಲಿಂದ ಹೊರಟು ಮಡ್ಗಾವ್ ಗೆ ಬಂದೆವು. ಸರಿ ಅಲ್ಲಿ ಒಬ್ಬೊಬ್ಬೊರು ಒಂದೊಂದು ದಿಕ್ಕಿಗೆ ಹೋದರು. ಅದಕ್ಕೆ ಕಾರಣ ನಮ್ಮ ಪ್ರಸಾದ್. ಅವರು ಎಲ್ಲರಿಗೂ ಹೇಳಿದರು "ಇಲ್ಲಿ ಗೋಡಂಬಿ ರೇಟ್ ತುಂಬಾ ಕಡಿಮೆ ಇದೆ ಅಲ್ಲಿ ಬೋರ್ಡ್ ಹಾಕಿದ್ದಾರೆ" ಎಂದರು ಸರಿ ಎಲ್ಲರೂ ಗೋಡಂಬಿ ತರಲು ಹೋದರು. ಹೋಗಿ ವಿಚಾರಿಸಿದವರೆಲ್ಲರಿಗೂ ಮುಖ ಭಂಗ. ಏಕೆಂದರೆ ಗೋಡಂಬಿ ರೇಟ್ ನಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವೇನೂ ಇಲ್ಲ. ಸರಿ ಹೋಗಿ ಕೇಳಿದ ತಪ್ಪಿಗಾಗಿ ಕೆಲವರು ಗೋಡಂಬಿ ಕೊಂಡರು ಮತ್ತೆ ಕೆಲವರು ಕೋಕಂ ಜೂಸ್ ಕೊಂಡುಕೊಂಡರು. ಇಲ್ಲೇ ಸಮಯ 8 ಆಯ್ತು. ಸರಿ ಎಲ್ಲರೂ ಒಂದೆಡೆ ಸೇರಿದೆವು ಮತ್ತು ಅಲ್ಲಿಂದ ಹೊರಟು ಕಲಂಗೂಟ್ ಗೆ ಬಂದಿಳಿದೆವು. ನಂತರ ಸಾಕಷ್ಟು ಹೊತ್ತು ಶಾಪಿಂಗ್ ಎಂದು ಎಲ್ಲರೂ ಅಡ್ಡಾಡಿದೆವು. ತದನಂತರ (ಅಂದರೆ ಹೊಟ್ಟೆ ಚುರುಗುಟ್ಟ ತೊಡಗಿದಾಗ) ಎಲ್ಲರೂ ಸೇರಿ, ವೆಜ್ ನವರು ಒಂದು ಗುಂಪು ಮತ್ತು ನಾನ್ ವೆಜ್ ನವರು ಒಂದು ಗುಂಪು ಮಾಡಿಕೊಂಡು ಪ್ರತ್ಯೇಕ ಹೋಟೇಲ್ ಗೆ ಹೋಗಿ ಊಟ ಮಾಡಿ ಶಯನಾಗಾರಕ್ಕೆ ಬಂದು ತಲುಪಿದೆವು. ಎಲ್ಲರೂ ದಣಿದಿದ್ದ ಕಾರಣ ತಕ್ಷಣವೇ ನಿದ್ರಾವಸ್ಥೆಗೆ ಜಾರಿದರು
No comments:
Post a Comment