ಬೆಳಿಗ್ಗೆ ಲಗು ಭಗೆ ಯಿಂದ ಎಲ್ಲರೂ ಮುಂದಿನ ಪ್ರಯಾಣಕ್ಕೆ ಸಿದ್ಧವಾದರು. ಎಲ್ಲರೂ ರೆಡಿಯಾಗುವ ಹೊತ್ತಿಗೆ ಸರಿಯಾಗಿ, ಟೀ ಮತ್ತು ಬ್ರೆಡ್ ಬಂದಿತು.
ಚಹಾ ಸೇವನೆಯಲ್ಲಿ ನಿರತ: ಶಿವರಾಮ್ ಶೆಟ್ಟಿ, ಪ್ರಸಾದ್, ಮಹೇಶ್, ಸುಬ್ರಹ್ಮಣ್ಯ, ಮುರಳೀಧರ್, ಪಾರ್ಥಸಾರಥಿ ಮತ್ತು ಮಂಜುನಾಥ್ (ಎಡದಿಂದ)
ಚಹಾ ಸೇವನೆ ಮತ್ತು ತಯಾರಿ : ಸಹನಾ, ಪ್ರೀತಿ ಮತ್ತು ದಯಾಮಣಿ.
ಶ್ರೀಮತಿ. ದೇವಯಾನಿ, ಸಹನಾ, ಶ್ರೀ.ಕೇಶವ್ ಕುಂಬ್ಳ, ಪ್ರೀತಿ ಮತ್ತು ರಿತಿಕಾ.
ಚಹಾ ಸೇವನೆ ಮತ್ತು ಲಘು ಉಪಹಾರದ ಬಳಿಕ ಎಲ್ಲರೂ ತಮ್ಮ ತಮ್ಮ ಲಗೇಜುಗಳನ್ನು ತೆಗೆದುಕೊಂಡು ಹೊರಡಲು ಅನುವಾದರು. ಹೊರಡುವ ಮುನ್ನ ನಮ್ಮ ಗುಂಪಿನ ಎಲ್ಲಾ ಸದಸ್ಯರ ಒಂದು ಫೋಟೋವನ್ನು ಗೆಸ್ಟ್ ಹೌಸ್ ನ ಮಾಲೀಕರಾದ ಆಂಟೊನಿಯವರು ಕ್ಲಿಕ್ಕಿಸಿದರು.
ತದನಂತರ ಎಲ್ಲರೂ ಅವರವರ ಲಗೇಜ್ ಗಳನ್ನು ತೆಗೆದುಕೊಂಡು ನಮ್ಮ ವಾಹನವನ್ನೇರಿ 7.15 ರ ಸುಮಾರಿಗೆ ಕಲಂಗೂಟ್ ನಿಂದ ಜೋಗ್ ಫಾಲ್ಸ್ ಕಡೆಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು.
No comments:
Post a Comment