ಚರ್ಚ್ ನಿಂದ ನಾವು ಮಂಗೇಶಿ ದೇವಸ್ಥಾನದ ಕಡೆಗೆ ಹೊರಟೆವು. ಮಂಗೇಶಿ ದೇವಸ್ಥಾನಕ್ಕೇ ಕರೆದುಕೊಂಡು ಹೋಗುವುದಾಗಿ ನಮ್ಮ ಡ್ರೈವರ್ ಪಾಂಡು ಹೇಳಿ ಕೆಳಗಿನ ಚಿತ್ರದಲ್ಲಿ ನೀವು ನೋಡುತ್ತಿರುವ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಇದೇ ಮಂಗೇಶಿ ದೇವಸ್ಥಾನ ಎಂದು ಹೇಳಿದರು. ಆದರೆ ಗೋವಾದ ಬಗ್ಗೆ ಅದರಲ್ಲೂ ಮಂಗೇಶಿ ದೇವಸ್ಥಾನದ ಬಗ್ಗೆ ಚೆನ್ನಾಗೇ ತಿಳಿದುಕೊಂಡಿದ್ದ ರಮೇಶ್ ರವರು ಇದು ಮಂಗೇಶಿ ದೇವಸ್ಥಾನವಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಯಾಕೆಂದರೆ ಮಂಗೇಶಿ ಅವರ ಮನೆಯ ದೇವರು. ಆದರೆ ಈ ಕೆಳಗಿನದ್ದು ಸಚ್ಚಿದಾನಂದ ದೇವಸ್ಥಾನವೆಂದು ಹೇಳಿದ ಅವರು ಇದರ ದರ್ಶನ ಮಾಡಲು ಅನುವುಮಾಡಿಕೊಟ್ಟರು. ಇದೊಂದು ಸುಂದರ ದೇವಸ್ಥಾನ.
ಸರಿ ಇಲ್ಲಿ ನಾವುಗಳ್ಯಾರೂ ಹೆಚ್ಚಿನ ಸಮಯ ವ್ಯಯ ಮಾಡಲಿಲ್ಲ. ಲಗುಬಗೆಯಿಂದ ಸ್ವಾಮಿಯ ದರ್ಶನ ಪಡೆದು ವಾಹನವೇರಿ ಮಂಗೇಶಿ ದೇವಸ್ಥಾನಕ್ಕೆ ಬಂದು ತಲುಪಿದೆವು. ಅಲ್ಲಿನ ದೃಶ್ಯಗಳನ್ನು ಕೆಳಗೆ ನೋಡಿ
ಮಂಗೇಶಿ ದೇವಸ್ಥಾನ
ಷಣ್ಮುಖ್, ಮುರಳೀಧರ್ ಮತ್ತು ಮಂಜುನಾಥ್
ದಯಾಮಣಿ ಮತ್ತು ಸಹನಾ
ಕಟ್ಟೆಯ ಮೇಲೆ (ಎಡದಿಂದ): ಮುರಳೀಧರ್, ಮಂಜುನಾಥ್, ಸುಬ್ರಹ್ಮಣ್ಯ, ಚಿ.ರಾಹುಲ್, ದಯಾಮಣಿ ಮತ್ತು ಪ್ರೀತಿ.
ದೇವಸ್ಥಾನದ ಬದಿ ಭಾಗ
ದೇವಸ್ಥಾನದ ಬಳಿಯ ಕಟ್ಟೆಯ ಮೇಲೆ ಮುರಳೀಧರ್ ಮತ್ತು ಮಂಜುನಾಥ್
ದೇವಸ್ಥಾನದ ಮುಂಭಾಗ
ದೇವಸ್ಥಾನದ ಬಳಿ ಶಿವರಾಮ್ ಶೆಟ್ಟಿ
ಮನೆ ದೇವರ ದರ್ಶನದ ನಂತರ ಫಲ ಪುಷ್ಪದೊಂದಿಗೆ ದೇವಸ್ಥಾನದಿಂದ ಹೊರ ಬರುತ್ತಿರುವ ರಮೇಶ್
ಇಂದು ಬೆಳಿಗ್ಗೆಯಿಂದ ಉಪವಾಸವಿದ್ದ ರಮೇಶ್ ರವರು ಮಂಗೇಶಿ ದೇವರ ದರ್ಶನದ ನಂತರ ಕೋಕಂ ಜೂಸ್ ಕುಡಿಯುತ್ತಿರುವುದು
ಸರಿ, ಎಲ್ಲರೂ ದರ್ಶನ ಮುಗಿಸಿದೆವು. ನಂತರ ಎಲ್ಲರೂ ಅಲ್ಲೇ ಸಮೀಪದಲ್ಲಿದ್ದ ಪಾನೀಯ ಅಂಗಡಿಯಲ್ಲಿ ಕೋಕಂ ಜೂಸ್ ಕುಡಿದೆವು. ನಂತರ ಎಲ್ಲರೂ ಅಲ್ಲಿ ಸಾಲು ಸಾಲಾಗಿ ಇರುವ ತರಾವರಿ ಅಂಗಡಿಗಳಲ್ಲಿ ಶಾಪಿಂಗ್ ಗೆ ಹೊರಟರು. ಎಲ್ಲರೂ ಅವರವರ ಬಯಕೆಯಾನುಸಾರ ಅಲ್ಲಿ ದೊರಕುತ್ತಿದ್ದ ಸಾಮಾನುಗಳನ್ನು ಕೊಂಡುಕೊಂಡರು. ನಮ್ಮ ಮುರಳೀಧರ್ ರವರು ಎಲ್ಲರಿಗಿಂತ ಭಿನ್ನವಾಗಿ ಗೋವಾದ ಪ್ರಸಿದ್ಧ ಟ್ಯಾಟೂ ನ ಮೊರೆ ಹೋಗಿ ತಮ್ಮ ಬಲಗೈ ತೋಳಿಗೆ ಸಿಂಹದ ಟ್ಯಾಟೂ ಹಾಕಿಸಿಕೊಂಡರು.
ಬಹಳ ಸಮಯದ ನಂತರ ಎಲ್ಲರೂ ಅಲ್ಲಿಂದ ಹೊರಟೆವು. ನಮ್ಮ ಮುಂದಿನ ಗುರಿ ಊಟ. ಸರಿ ನಾವು ಮಡ್ಗಾವ್ ಮೂಲಕ ತೆರಳುವಾಗ ಅಲ್ಲಿನ ಮುನ್ಸಿಪಾಲಿಟಿ ಕಟ್ಟಡದ ಸಮೀಪದಲ್ಲಿದ್ದ ಕಾಮತ್ ಉಪಚಾರ್ ನಲ್ಲಿ ಊಟ ಮಾಡಿ. ಲೀಲಾ ಬೀಚ್ ಕಡೆ ಪ್ರಯಾಣ ಮುಂದುವರೆಸಿದೆವು.
your creation is very nice
ReplyDelete