Wednesday, September 30, 2009

ಪ್ಯಾರಾಡೈಸ್ ಹಡಗಿನಲ್ಲಿನ ಸುಂದರ ಸಂಜೆ

5 ಘಂಟೆಗೆ ಡೌನ್ ಪಾಲ್ ಬೀಚ್ ನಿಂದ ಹೊರಟ ನಾವುಗಳು ಕಲಂಗೂಟ್ ಬೀಚ್ ಗೆ ಹೋಗುವ ಮಾರ್ಗ ಮಧ್ಯ ದಲ್ಲಿ ಇನ್ನೊಂದು ಸಮುದ್ರ ಕಣ್ಣಿಗೆ ಕಂಡಿತು. ಅಲ್ಲಿಗೆ ಹೋಗೋಣ ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದರು. ಆದರೆ, ಬಹುಮತ ದೊರಕದ ಕಾರಣ ಕಲಂಗೂಟ್ ಕಡೆಗೆ ಪ್ರಯಾಣ ಮುಂದುವರೆಯಿತು. ಪಣಜಿಯ ಬಂದರಿನ ಪಕ್ಕದಲ್ಲಿ ಹಾದು ಹೋಗುತ್ತಿರುವಾಗ ಅಲ್ಲಿನ ಸಮುದ್ರದಲ್ಲಿ ಕೆಲವು ಹಡಗುಗಳು ಚಲಿಸುತ್ತಿದ್ದವು. ನಾವೆಲ್ಲರೂ ಆ ಸುಂದರ ದೃಶ್ಯಗಳನ್ನು ನಮ್ಮ ನಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದುಕೊಂಡು ಬರಲು ನಮ್ಮ ವಾಹನವನ್ನು ನಿಲ್ಲಿಸಿ ಕೆಳಗಿಳಿದೆವು.






ಅಷ್ಟು ಹೊತ್ತಿಗೆ ವ್ಯಕ್ತಿಯೊಬ್ಬರು ಬಂದು ಆ ಹಡಗಿನಲ್ಲಿ ನಾವೂ ಕೂಡಾ ಪ್ರಯಾಣಿಸಿ ಖುಷಿ ಪಡಬಹುದಾಗಿದ್ದು 1.15 ಘಂಟೆ ಅವದಿಯ ಈ ಪ್ರಯಾಣಕ್ಕೆ 150 ರೂ ಪಾವತಿಸಿ ಪ್ರಯಾಣಿಸಬಹುದೆಂದು ತಿಳಿಸಿದರು. ನಾವೆಲ್ಲರೂ ಇದರ ಅನುಭವವನ್ನು ಪಡೆದುಕೊಳ್ಳೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದಾಗ, ರಮೇಶ್ ರವರು ಆ ವ್ಯಕ್ತಿಯೊಂದಿಗೆ ಚರ್ಚಿಸಿ ಟಿಕೆಟ್ ದರವನ್ನು 125 ಕ್ಕೆ ಇಳಿಸಿದರು. ಹಡಗಿನಲ್ಲಿನ ನಮ್ಮ ಪ್ರಯಾಣ 7.30 ಕ್ಕೆ ಆರಂಭವಾಯಿತು.














ಹಡಗಿನಲ್ಲಿ ಕುಳಿತ ನಾವೆಲ್ಲರೂ ಅಲ್ಲಿನ ವೇದಿಕೆಯಲ್ಲಿ ಶುರುವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಆನಂದಿಸತೊಡಗಿದೆವು. ಗೋವಾದ ಜಾನಪದ ನೃತ್ಯ, ಹಾಡುಗಳು ಮತ್ತಿತರೆ ಕಾರ್ಯಕ್ರಮಗಳು ನಡೆದವು. ಇವಲ್ಲದೇ ಪ್ರಯಾಣಿಕರೂ ಸಹಾ ವೇದಿಕೆಯನ್ನೇರಿ ಕುಣಿದು ಖುಷಿ ಪಡಲು ಸಹಾ ಅವಕಾಶ ಕಲ್ಪಿಸಲಾಯಿತು. ಈ ಅವಕಾಶವನ್ನು ನಾನು, ರಮೇಶ್ ಮತ್ತು ಪಾರ್ಥಸಾರಥಿಯವರು ಉಪಯೋಗಿಸಿಕೊಂಡೆವು.



ನಮಗಿಂತ ಹೆಚ್ಚಾಗಿ ಅಲ್ಲಿ ನೆರೆದಿದ್ದ ಎಲ್ಲಾ ಪ್ರಯಾಣಿಕರನ್ನು ಹೆಚ್ಚು ರಂಜಿಸಿದವರೆಂದರೆ ಶ್ರೀಮತಿ. ಉಮಾ ಶೆಟ್ಟಿ, ಶ್ರೀಮತಿ ದೇವಯಾನಿ ಮತ್ತು ರಿತಿಕಾ ರವರ ನೃತ್ಯ




ಇವರುಗಳ ಸುಂದರ ನೃತ್ಯವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ



ಇಷ್ಟೆಲ್ಲಾ ಸುಂದರ ಕ್ಷಣಗಳನ್ನು ಪ್ಯಾರಡೈಸ್ ಹಡಗಿನಲ್ಲಿ ಕಳೆದ ನಾವುಗಳು 8.45 ಕ್ಕೆ ಹಡಗಿನ ಪ್ರಯಾಣ ಮುಗಿಸಿ ಕೆಳಗಿಳಿದೆವು.













ಈ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನಾವುಗಳು ಕಲಂಗೂಟ್ ಗೆ ತಲುಪಿದಾಗ ಸಮಯ 9.15 ಆಗಿತ್ತು. ಸರಿ ಎಲ್ಲರ ಹೊಟ್ಟೆ ತಾಳಹಾಕುತ್ತಿತ್ತು. ಅಂಥ ಸಮಯದಲ್ಲೂ ಕೆಲವರು ಶಾಪಿಂಗ್ ಎಂದು ಕಾಲಹರಣ ಮಾಡಿದರು. ನಂತರ ನಿನ್ನೆಯಂತೆ ಇಂದೂ ಸಹಾ, ವೆಜ್ ಮತ್ತು ನಾನ್-ವೆಜ್ ಗುಂಪುಗಳನ್ನು ಮಾಡಿಕೊಂಡು ಊಟಕ್ಕೆ ಹೊರಟೆವು. ನಾಳೆ ಎಲ್ಲರೂ ಬೆಳೆಗ್ಗೆ ಬೇಗನೇ ಎದ್ದು ಹೊರಟರೆ ಮಾತ್ರ ನಾವು ನಾಳೆ ಜೋಗ್ ಫಾಲ್ಸ್ ನೋಡಿಕೊಂಡು 29.09.2009 ರ ರಾತ್ರಿ 10 ಘಂಟೆಯ ಒಳಗೆ ಅವರವರ ಮನೆ ಸೇರಿಕೊಳ್ಳಲು ಸಾಧ್ಯ ಎಂದು ರಮೇಶ್ ತಿಳಿಸಿದಾಗ ಎಲ್ಲರೂ ಸಮ್ಮತಿಸಿ ಬೇಗನೇ ಊಟ ಮುಗಿಸಿ ನಿದ್ರಾಸೀನರಾದೆವು.

ಇದರೊಂದಿಗೆ 28.09.2009 ರ ನಮ್ಮ ಕಾರ್ಯಕ್ರಮ ಅಂತ್ಯಗೊಂಡಿತು.

No comments:

Post a Comment